
ಪರೀಕ್ಷೆ ದಿನವೇ ತಾಯಿಯ ನಿಧನ ; ಆಶಿರ್ವಾದ ಪಡೆದು ತೆರಳಿದ ಮಗ

ಚೆನೈ : ದ್ವಿತೀಯ ಪಿಯುಸಿ ಪರೀಕ್ಷೆ ದಿನವೇ ತಾಯಿ ನಿಧನ ಹೊಂದಿದ್ದು, ಆಕೆಯ ಶವದ ಮುಂದೆ ನಿಂತು ನಮಸ್ಕರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ ಮನಕಲುಕುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲಿಯೂರ್‌ನಲ್ಲಿ ನಡೆದಿದೆ.
ಸುನಿಲ್‌ಕುಮಾರ್ ಎಂಬ 12ನೇ ತರಗತಿ ವಿದ್ಯಾರ್ಥಿಯ ತಾಯಿ ಸುಬ್ಬಲಕ್ಷ್ಮಿ ಹೃದಯ ಸಮ್ಯಸೆಯಿಂದಾಗಿ ಮಾರ್ಚ್ 3 ರಂದು ಮೃತರಾದರು. ಮಾರನೇ ದಿನವೇ ಸುನಿಲ್‌ಗೆ 12 ನೇ ತರಗತಿಯ ಬೋರ್ಡ್ ಪರೀಕ್ಷೆ ಇತ್ತು. ಆದರೆ ಮನೆಯಲ್ಲಿ ಈ ರೀತಿಯ ಘಟನೆ ಆತನನ್ನು ಕಂಗೆಡಿಸಿತ್ತು.
ಮೃತ ತಾಯಿಯ ಪಾದಕ್ಕೆ ಹಾಲ್‌ಟಿಕೆಟ್ ಇರಿಸಿ ಕೈಮುಗಿದು ಕಣ್ಣೀರು ಹಾಕುತ್ತಲೇ ಪರೀಕ್ಷಾ ಕೇಂದ್ರಕ್ಕೆ ಆತ ತೆರಳಿದ್ದಾರೆ. ಸುನಿಲ್ ತಂಗಿ ಯಾಸಿನಿಯನ್ನು ಸಂಬಂಧಿಕರು ಪೋಷಿಸುತ್ತಿದ್ದಾರೆ. ರಾಜ್ಯ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರು ಸುನಿಲ್ ಜತೆಗೆ ದೂರವಾಣಿ ಮೂಲಕ ಮಾತನಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ.
ವಿಷಯ ತಿಳಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರು ಟ್ವಿಟರ್ ನಲ್ಲಿ ಈ ವಿಚಾರ ಪ್ರಸ್ತಾಪಿಸಿ, ವಿದ್ಯಾರ್ಥಿಗೆ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.