ಮಣ್ಣು ಉಳಿಸಿ ಅಭಿಯಾನಕ್ಕೆ ಯುವಕರ ಬೆಂಬಲ
ಕೊಯಂಬತ್ತೂರು : ಈಶ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ಕುಂದಾನಗರಿ ಯುವಕರು ಬೆಂಬಲ ಸೂಚಿಸಿದ್ದಾರೆ.
ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹದ ಮುಂಬಾಗ ಕುಂದಾನಗರಿ ಯುವಕರು ಮಣ್ಣು ಉಳಿಸಿ ಅಭಿಯಾನದ ಪೋಸ್ಟರ್ ಮೂಲಕ ಸದ್ಗುರು ಅವರ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರವೀಣ್, ಶ್ರೀಧರ್, ಶ್ರವಣ, ಕಿಶೋರ್, ಅರುಣ್, ರಾಹುಲ್ ಹಾಗೂ ಸಂತೋಷ ಉಪಸ್ಥಿತರಿದ್ದರು.