ಯುವಕರಿಂದ ಖಿಳೇಗಾಂವ ಬಸವೇಶ್ವರ ದೇವಸ್ಥಾನ ಸ್ವಚ್ಛತಾ ಕಾರ್ಯ
ಅಥಣಿ : ತಾಲೂಕಿನ ಖಿಳೇಗಾಂವ ಗ್ರಾಮದ ಸುಕ್ಷೇತ್ರ ಖಿಳೇಗಾಂವ ಬಸವೇಶ್ವರ ದೇವಸ್ಥಾನದ ಆವರಣವನ್ನು ಯುವಕರು ಸ್ವಚ್ಚಗೊಳಿಸಿದರು.
ಅಥಣಿಯ ರಾಣಿ ಚೆನ್ನಮ್ಮ ಫೌಂಡೇಶನ್ ಸದಸ್ಯರು ಭಾನುವಾರ ಸಾವಿರಾರು ಭಕ್ತರು ಭೇಟಿ ನೀಡುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಚಗೊಳಿಸುವ ಮೂಲಕ ಸೇವಾಕಾರ್ಯ ಮಾಡಿದ್ದಾರೆ.
ಸುಮಾರು ನಲವತ್ತು ಯುವಕರ ತಂಡ ಸೇರಿಕೊಂಡು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಫೌಂಡೆಶನ್ ಅದ್ಯಕ್ಷ ಶಶಿಧರ ಬರ್ಲಿ, ಪ್ರಶಾಂತ ಚಂಡಕಿ, ಸಂಗಮೇಶ ಸವದಿ, ಸಚಿನ ಹೊನವಾಡ, ಸಾಗರ ಸಾತನ್ನವರ, ವಿಜಯ ತಾಂವಶಿ ಇತರರು ಇದ್ದರು.