
ಡ್ಯಾಂ ಗೇಟ್ ಕಟ್ ; ಪ್ರವಾಹದ ಭೀತಿಯಲ್ಲಿ ನದಿ ಪಾತ್ರದ ಜನ

ಕೊಪ್ಪಳ : ತುಂಗಭದ್ರಾ ಜಲಾಶಯದ 19 ನೇ ನಂಬರಿನ ಗೇಟ್ ಕಟ್ ಆದ ಪರಿಣಾಮ ಅಧಿಕ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿರುವ ಕಾರಣ ನದಿ ಪಾತ್ರದಲ್ಲಿ ಸಧ್ಯ ಪ್ರವಾಹದ ಭೀತಿ ಎದುರಾಗಿದೆ.
ಶನಿವಾರ ರಾತ್ರಿ 11 ಗಂಟೆಗೆ ತುಂಗಭದ್ರಾ ಜಲಾಶಯದ 19 ನಂಬರ್ ಗೇಟಿನ ಚೈನ್ ಲಿಂಕ್ ಕಟ್ ಆಗಿದೆ. ಇದರಿಂದ 1 ಲಕ್ಷ ಕ್ಯೂಸೆಕ್ ಗಿಂತಲೂ ಅಧಿಕ ನೀರು ನದಿಗೆ ಹರಿದು ಹೋಗುತ್ತಿರುವ ಪರಿಣಾಮ ಜನರಲ್ಲಿ ಆತಂಕ ಮೂಡಿಸಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸಚಿವರು ಹಾಗೂ ಸ್ಥಳೀಯ ಶಾಸಕ ಭೇಟಿನೀಡಿ ಪರಿಸ್ಥಿತಿ ಅವಲೋಕಿಸಿದರು. ಬಾಗಿಲು ಕಟ್ ಆದ ಹಿನ್ನಲೆಯಲ್ಲಿ ಇತರ ಗೇಟ್ ನಿಂದಲೂ ಸ್ವಲ್ಪ ನೀರು ಹರಿಸಲಾಗುತ್ತಿದೆ.
133 ಟಿಎಂಸಿ ಸಾಮಥ್ರ್ಯದ ಭದ್ರಾ ಆಣೆಕಟ್ಟಿನಲ್ಲಿ ಸಧ್ಯ ಸಮಸ್ಯೆ ಎದುರಾಗಿದ್ದು ಸುಮಾರು 20 ಅಡಿ ವರೆಗೆ ನೀರು ಹೊರಬಿಟ್ಟರೆ ಮಾತ್ರ ಸಮಸ್ಯೆ ಏನೆಂಬುವುದು ತಿಳಿಯಲಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.