ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಹೇಳಿಕೆಗೆ ಮಹಾಂತೇಶ್ ವಕ್ಕುಂದ ಆಕ್ರೋಶ
ಬೆಳಗಾವಿ : ಬಸವ ಜಯಂತಿಯ ದಿನ ಲಿಂಗಾಯತರು ಭ್ರಷ್ಟರು ಎಂಬ ಹೇಳಿಕೆ ನೀಡಿ ಈ ನಾಡಿನ ಪ್ರಬಲ ಸಮುದಾಯವನ್ನು ಹೀಯಾಳಿಸಿ ತಮ್ಮ ನಾಲಿಗೆಯನ್ನು ಹರಿಬಿಟ್ಟಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ನನ್ನ ಧಿಕ್ಕಾರವಿದೆ ಎಂದು ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ್ ವಕ್ಕುಂದ ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತರು ಭ್ರಷ್ಟರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ವೀಡಿಯೊ ಹಂಚಿಕೊಂಡ ಇವರು. ಲೋಕಕಲ್ಯಾಣಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆದ ಬಸವಣ್ಣ. ಸಮಾನತೆ, ಸಾಕ್ಷರತೆ, ಕಾಯಕ, ದಾಸೋಹಗಳ ಮೂಲಕ ತನ್ನ ಅನುಯಾಯಿಗಳನ್ನೂ ನಾಗರಿಕ ಸಮಾಜದ ಶ್ರೇಯೋಭಿವೃದ್ಧಿಗಾಗಿ ದುಡಿಯುವಂತೆ ಪ್ರೇರೇಪಿಸಿದ ಮಹಾತ್ಮ.
ಜಗತ್ತಿಗೆಲ್ಲ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ದಾರ್ಶನಿಕ, ಅಂತಹ ಬಸವಣ್ಣನ ನೆರಳಿನಡಿಯಲ್ಲಿ ಲಿಂಗಾಯತ ಮಠ ಮಂದಿರಗಳು ಮಾಡುವ ಅಕ್ಷರ ದಾಸೋಹದಲ್ಲಿ ಎಲ್ಲ ಸಮಾಜದ ಮಕ್ಕಳು ವಿದ್ಯೆ ಕಲಿಯುತ್ತಾರೆ. ತಾವು ಮಾಜಿ ಮುಖ್ಯಮಂತ್ರಿಯಾಗಿ ನೀಡಿರುವ ಹೇಳಿಕೆ ಖಂಡನೀಯ ಎಂದರು.