ಮತದಾರರಿಗೆ ಹಂಚಲು ತಂದಿದ್ದ 1600 ಕುಕ್ಕರ್ ವಶ
ಬೆಳಗಾವಿ : ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮಕ್ಕೆ ಹೊಂದಿಕೊಂಡಂತೆ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಹಾಗೂ ಎಫ್.ಎಸ್.ಟಿ. ತಂಡವು ಶನಿವಾರ(ಏ.22) ಮಧ್ಯಾಹ್ನ ತೋಟದ ಮನೆಯ ತಗಡಿನ ಷೆಡ್ ನಲ್ಲಿದ್ದ ಸುಮಾರು 1600 ಕುಕ್ಕರ್ ಗಳನ್ನು ಪತ್ತೆ ಮಾಡಿರುತ್ತದೆ.
ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಿರ್ದೇಶನದಂತೆ ಎಫ್ . ಎಸ್. ಟಿ ಟೀಮ್ ಹಾಗೂ ಸೌದತ್ತಿ ವಲಯದ ಅಧಿಕಾರಿಗಳ ಸಿಬ್ಬಂದಿಯೊಂದಿಗೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 54ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶೆಡ್ಡಿನ ಬಾಗಿಲನ್ನು ತೆರೆದು ನೋಡುದಾಗ ಕುಕ್ಕರ್ ಪೆಟ್ಟಿಗೆಗಳಿರುವುದು ಕಂಡುಬಂದಿದೆ.