ಎಎಪಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಭರ್ಜರಿ ಪ್ರಚಾರ
ಬೆಳಗಾವಿ ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಕಣಬರಗಿ ಹಾಗೂ ರಾಮತೀರ್ಥ ನಗರದಲ್ಲಿ ಶನಿವಾರ ಪ್ರಚಾರ ನಡೆಸಿದರು.
ರಾಮತೀರ್ಥದ ನಗರದ ಜನರು ರಾಜಕುಮಾರ ಟೋಪಣ್ಣವರ ಅವರ ಬಳಿ ಸಮಸ್ಯೆ ಹೇಳಿಕೊಂಡಾಗ ಬೆಳಗಾವಿ ರಾಮತೀರ್ಥ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳ ಒದಗಿಸಿಕೊಡುವೆ. ಒಂದು ಬಾರಿ ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ಕೊಡುವಂತೆ ಮತದಾರರಲ್ಲಿ ಟೋಪಣ್ಣವರ ಮನವಿ ಮಾಡಿಕೊಂಡರು.
ಕಣಬರಗಿಯಲ್ಲಿ ಬೆಳಗ್ಗೆ ವಾಯು ವಿಹಾರಿಗಳಿಗೆ ಭೇಟಿಯಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಉತ್ತರ ಮತಕ್ಷೇತ್ರದಲ್ಲಿ ಬದಲಾವಣೆ ಮಾಡಿ ಆಪ್‌ಗೆ ಮತ ನೀಡುವಂತೆ ಪ್ರಚಾರ ನಡೆಸಿದರು.
ಅಲ್ಲದೆ, ಬೆಳಗಾವಿ ಅಮ್ಮ ಪ್ರತಿಷ್ಠಾನದ ಸಂಸ್ಥಾಪಕರು, ಸಾಮಾಜ ಸೇವಕರಾದ ಶ್ರೀ ಡಾ. ಬಾಳಾಸಾಹೇಬ ಉದಗಟ್ಟಿ ಅವರು ಆಮ್ ಆದ್ಮಿ ಪಕ್ಷದ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿರುವ ನನಗೆ ಪಕ್ಷದ ಪ್ರಚಾರಕ್ಕಾಗಿ 51 ಸಾವಿರ ಚೆಕ್ ನೀಡಿರುವುದಕ್ಕೆ ಅವರಿಗೆ ಋಣಿಯಾಗಿರುತ್ತೇನೆ ಎಂದರು.