Select Page

ಹೆಬ್ಬಾಳ್ಕರ್ ಮೂರು ತಿಂಗಳ ಶಪಥ – ಮೌನಕ್ಕೆ ಶರಣಾಗಲು ಏನು ಕಾರಣ?

ಹೆಬ್ಬಾಳ್ಕರ್ ಮೂರು ತಿಂಗಳ ಶಪಥ – ಮೌನಕ್ಕೆ ಶರಣಾಗಲು ಏನು ಕಾರಣ?

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಮಹಿಳೆಯರ ಪರವಾದ ಸರ್ಕಾರ ಬರಬೇಕಿದೆ. ಈ ಬಾರಿ ತಾಳ್ಮೆಯಿಂದ ಚುನಾವಣೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಗಳಿಗೆ ಹಾಗೂ ಸಿಡಿ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

3 ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೆಟ್ಟದ್ದನ್ನು ಕೇಳಲ್ಲ, ಕೆಟ್ಟದ್ದನ್ನು ಮಾಡಲ್ಲ. ನಾನು ಮಾಡಿದ ಅಭಿವೃದ್ಧಿ ಕೆಲಸದಿಂದ ಚುನಾವಣೆಯಲ್ಲಿ ಗೆಲ್ಲಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ. ಹಾಗಾಗಿ ಮೂರು ತಿಂಗಳು ಬಹಳ ತಾಳ್ಮೆಯಿಂದ ಇರಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ರಾಜಕಾರಣದಲ್ಲಿ ಮಹಿಳೆಯರು ಪ್ರತಿ ಹಂತದಲ್ಲೂ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕು. ರಾಜಕಾರಣ ಎಂದರೆ ಮಹಿಳೆಯರಿಗೆ ಸುಲಭವಲ್ಲ. ಬಹಳ ಕಷ್ಟ, ಇಲ್ಲಿ ಪ್ರತಿ ಕ್ಷಣ ಅಗ್ನಿಪರೀಕ್ಷೆಗಳೇ. ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲಾಗಿಲ್ಲ. ಹೀಗಿರುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ. ಒಂದು ರೀತಿ ಮಹಿಳೆ ಎಂದರೆ ಹುಟ್ಟಿನಿಂದ ಸಾಯುವವರೆಗೂ ಪ್ರತಿ ಹಂತದಲ್ಲೂ ಪರೀಕ್ಷೆ, ಸವಾಲುಗಳನ್ನೇ ಹೊತ್ತು ಎದುರಿಸಬೇಕು. ಮಹಿಳೆ ಎಂದರೆ ಸಂಘರ್ಷವೂ ಜೊತೆಯಲ್ಲೇ ಬರುತ್ತದೆ ಎಲ್ಲವನ್ನೂ ಎದುರಿಸಿ ಪಾಸಾಗಬೇಕು. ಹಾಗಾಗಿ ತಾಳ್ಮೆ ಮುಖ್ಯ, ಈ ಬಾರಿ ತಾಳ್ಮೆಯಿಂದ ಚುನಾವಣೆ ಎದುರಿಸುತ್ತೇನೆ ಮೂರು ತಿಂಗಳು ಬಹಳ ತಾಳ್ಮೆಯಿಂದ ಇರುತ್ತೇನೆ ಎಂದು ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!