Video – ಶಾಸಕರ ಆಪ್ತನ ಕಮಿಷನ್ ದಂದೆ ವೀಡಿಯೊ ವೈರಲ್ : ಕಾಗವಾಡದಲ್ಲಿನ ಕರಾಳ ದಂದೆ ನಿಮ್ಮ ಮುಂದೆ
ಬೆಳಗಾವಿ : ಬೆಳಗಾವಿ ಜಿಲ್ಲೆಯ ಶಾಸಕರೊಬ್ಬರ ಆಪ್ತರೆನ್ನಲಾದ ವ್ಯಕ್ತಿಯೋರ್ವರು ಗುತ್ತಿಗೆದಾರ ಬಳಿ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಿ ಕೊಡಲು ಕಮಿಷನ್ ದರ ಫಿಕ್ಸ್ ಮಾಡಿರುವ ಹಾಗೂ ಕೆಲವರಿಂದ ಲಕ್ಷ ಲಕ್ಷ ಹಣದ ಕಂತೆಗಳನ್ನು ಪಡೆದು ವಾಹನದಲ್ಲಿ ಇಟ್ಟಿರುವ ವಿಡಿಯೋ ತುಣುಕುಗಳು ವೈರಲ್ ಆಗಿದ್ದು ಭಾರಿ ಸದ್ದು ಮಾಡುತ್ತಿವೆ.
ರಾಜ್ಯ ಸರಕಾರ ಟೆಂಡರಗಳಲ್ಲಿ ಗುತ್ತಿಗೆದಾರರಿಂದ 40% ಪ್ರತಿಶತ ಕಮಿಷನ್ ದುಡ್ಡು ಪಡೆಯುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವಾಗ ಬೆಳಗಾವಿ ಜಿಲ್ಲೆಯ ಶಾಸಕರ ಆಪ್ತರೊಬ್ಬರ ಎನ್ನಲಾದ ವ್ಯಕ್ತಿಯು ಗುತ್ತಿಗೆದಾರರ ಬಳಿ ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಯ ಟೆಂಡರ್ ನೀಡಲು ದರ ನಿಗಧಿ ಮಾಡುವ ಕುರಿತು ಪ್ರಸ್ತಾಪ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಅದರಂತೆ ಮತ್ತೊಂದು ವಿಡಿಯೋದಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ತಮ್ಮ ಇನೋವಾ ವಾಹನದಲ್ಲಿ ಹಾಕಿಕೊಂಡು ತೆರಳವು ಮುನ್ನ ಇದು ಶಾಸಕರದ್ದಾಯಿತು ಇನ್ನು ಆಪ್ತರಿಗೆ ಒಂದು ಹತ್ತು ಸಾವಿರ ಕೊಡಿ ಎಂದು ಕೂಡಾ ವೈರಲ್ ಆದ ಎರಡನೇ ವಿಡಿಯೋ ದಲ್ಲಿ ಪ್ರಸ್ತಾಪ ಮಾಡಿರುವದು ವರದಿಯಾಗಿದೆ. ಆದರೆ ತಮ್ಮ ಬಳಿಯ ಎಲ್ಲ ದುಡ್ಡು ಖಾಲಿಯಾಗಿವೆ. ನಾಳೆ ಮತ್ತೆ ಕೊಡುವೆ ಎಂದು ಮಾತನಾಡಿರುವ ಬಗ್ಗೆನು ಈ ವಿಡಿಯೋ ದಲ್ಲಿ ಉಲ್ಲೇಖ ವಾಗಿದೆ ಎನ್ನಲಾಗಿದೆ.
ಅಲ್ಲದೆ ಕಡಿಮೆ ಕಮಿಷನ್ ದುಡ್ಡು ನೀಡುವ ಗುತ್ತಿಗೆದಾರನಿಗೆ ಟೆಂಡರ್ ನೀಡಲು ಸಾಹೇಬರು (ಶಾಸಕರು) ಒಪ್ಪುವದಿಲ್ಲ, ಅವರಿಗೆ ಗುತ್ತಿಗೆ ನೀಡುವದಿಲ್ಲ ಎಂದು ಅಭಿವೃದ್ಧಿ ಕಾಮಗಾರಿಯ ಕಮಿಷನ್ ದರ ನಿಗಧಿ ಮಾಡುವ ಚರ್ಚೆಯಲ್ಲಿ ಶಾಸಕರ ಆಪ್ತರು ಎನ್ನಲಾಗದ ಆ ವ್ಯಕ್ತಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.