Select Page

Advertisement

ಕೊಲೆ ಆರೋಪಿ ವಿನಯ್ ಕುಲಕರ್ಣಿ ಬೆನ್ನಿಗೆ ನಿಂತ ಕಾಂಗ್ರೆಸ್ : ಸಂಜಯ್ ಪಾಟೀಲ್ ವಾಗ್ದಾಳಿ

ಕೊಲೆ ಆರೋಪಿ ವಿನಯ್  ಕುಲಕರ್ಣಿ ಬೆನ್ನಿಗೆ ನಿಂತ ಕಾಂಗ್ರೆಸ್ : ಸಂಜಯ್ ಪಾಟೀಲ್ ವಾಗ್ದಾಳಿ

ಬೆಳಗಾವಿ : ಕೊಲೆ ಆರೋಪದ‌ ಮೇಲೆ ಹಿಂಡಲಗಾ ಕಾರಾಗೃಹದಲ್ಲಿ 9 ತಿಂಗಳು ಕಳೆದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮ‌  ದಿನಾಚರಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಸಮಾಜಕ್ಕೆ ‌ಏನು ಸಂದೇಶ‌ ಕೊಡಲು ಹೊರಟಿದ್ದಾರೆ ಎಂದು ಬೆಳಗಾವಿ ಬಿಜೆಪಿ‌ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ ಪ್ರಶ್ನಿಸಿದರು.

ಶನಿವಾರ ಕನ್ನಡ‌ ಸಾಹಿತ್ಯ ‌ಭವನದಲ್ಲಿ‌ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ‌ನೇತೃತ್ವದಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು‌. ಅದರ ಬಗ್ಗೆ ಚಕಾರ ಎತ್ತಯಲಿಲ್ಲ ಎಂದರು

ಕಿತ್ತೂರುದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕೊಲೆ‌ ಆರೋಪ ಇರುವ ವ್ಯಕ್ತಿ. ಅವರ ಜನ್ಮ‌ ದಿನಾಚರಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಆಗಮಿಸುತ್ತಿರುವುದು ದುರ್ದೈವದ ಸಂಗತಿ‌ ಎಂದರು.

ಹಿಂದೂ ಕಾರ್ಯಕರ್ತ, ಬಿಜೆಪಿ ಮುಖಂಡ ಯೋಗೇಶಗೌಡಾ ಕೊಲೆ ಪ್ರಕರಣದಲ್ಲಿ 9 ತಿಂಗಳು ಜೈಲಿನಲ್ಲಿ ಇದ್ದ ವಿನಯ ಕುಲಕರ್ಣಿ ಅವರ ಜನ್ಮ‌‌ ದಿನಾಚರಣೆ ಮಾಡುತ್ತಿರುವುದು ಹಾಸ್ಯಾದ್ಪದ. ಅಲ್ಲದೆ ಧಾರವಾಡಕ್ಕೆ ಸಮೀಪವಾಗುವ ಕಿತ್ತೂರಿನಲ್ಲಿ ಆಯೋಜನೆ ಮಾಡಿದ್ದಾರೆ.‌ ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಭಾಶಯ ಕೋರಲು ಬರುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್ ವ್ಯಕ್ತಿಯ ಜನ್ಮ ದಿನಾಚರಣೆಗೆ ಆಗಮಿಸುತ್ತಿರುವ ಕಾಂಗ್ರೆಸ್ ನಾಯಕರು ಆಗಮಿಸಿ‌ ಸಮಾಜಕ್ಕೆ ಏನು ಸಂದೇಶ‌ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

ಬೆಳಗಾವಿ ಬಿಜೆಪಿಯ ನಾಯಕರು ಕಾಂಗ್ರೆಸ್ ಬರಲಿದ್ದಾರೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ  ಬರುವ ಸುದ್ದಿ ಇದೆ ಎಂದು ಹೊಸ ಬಾಂಬ್ ಸಿಡಿಸಿದರು.

Advertisement

Leave a reply

Your email address will not be published. Required fields are marked *