BREAKING – ಗಲ್ಲು ಶಿಕ್ಷೆಯಿಂದ ಪಾರಾದ ವಿಕೃತ ಕಾಮಿ ಉಮೇಶ್ ರೆಡ್ಡಿ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಕಳೆದ ದಶಕಗಳಿಂದ ಹಿಂಡಲಗಾ ಕಾರಾಗೃಹದಲ್ಲಿ ಕತ್ತಲು ಕೋಣೆಯಲ್ಲಿ ಕಳೆಯುತ್ತಿರುವ ವಿಕೃತ ಕಾಮಿ ಉಮೇಶ ರೆಡ್ಡಿಯ ಮರಣ ದಂಡಣೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಒಂಟಿ ಮಹಿಳೆಯರ ಮೇಲೆ ಗುರಿಯಾಗಿಸಿ ಅವರ ಒಳ ಉಡುಪು ಕದ್ದು ವಿಕೃತವಾಗಿ ಅತ್ಯಾಚಾರ ಮಾಡಿ ಅವರನ್ನು ಕೊಲೆ ಮಾಡಿ ದಶಕಗಳಿಂದ ಹಿಂಡಲಗಾ ಜೈಲಿನಲ್ಲಿದ್ದ ಕಾಮುಕ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಮರಣ ದಂಡಣೆ ವಿಧಿಸಿತ್ತು.
ಹಿಂಡಲಗಾ ಜೈಲಿನಿಂದಲೇ ವಿಕೃತ ಕಾಮಿ ಉಮೇಶ ರೆಡ್ಡಿ ತನ್ನ ವಕೀಲರ ಮೂಲಕ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿ ಸಲ್ಲಿಸಿದ್ದರು ಅದು ತಿರಸ್ಕಾರವಾಗಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದ ವಿಕೃತ ಕಾಮುಕ ರೆಡ್ಡಿ ಕಳೆದ 10 ವರ್ಷಗಳಿಂದ ಕತ್ತಲೆ ಕೋಣೆಯಲ್ಲಿ ಕಳೆದಿದ್ದಾರೆ. ಅವರ ಆರೋಗ್ಯದ ಸಾಕಷ್ಟು ಪರಿಣಾಮ ಬಿರಿದೆ. ಅವರ ಮರಣ ದಂಡಣೆ ರದ್ದುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.