Select Page

ಗಂಡನ ದೇಹ ಕತ್ತರಿಸಿದ ಹೆಂಡ್ತಿ ; ಉಮರಾಣಿ ರಕ್ತ ಚರಿತ್ರೆ

ಗಂಡನ ದೇಹ ಕತ್ತರಿಸಿದ ಹೆಂಡ್ತಿ ; ಉಮರಾಣಿ ರಕ್ತ ಚರಿತ್ರೆ

ಚಿಕ್ಕೋಡಿ : ರಾತ್ರಿ ಎಲ್ಲರೂ‌ ಮಲಗಿದ ವೇಳೆ ಗಂಡನ ಮೇಲೆ‌ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ನಂತರ ದೇಹವನ್ನು ತುಂಡರಿಸಿ ತೋಟದಲ್ಲಿ ಎಸೆದ ಘಟನೆ ಬೆಳಕಿಗೆ ಬಂದಿದ್ದು ಕೃತ್ಯ ಎಸಗಿದ ಪತ್ನಿ ಸದ್ಯ ಪೊಲೀಸರ ಅತಿಥಿ ಆಗಿದ್ದಾಳೆ.

ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ ಮೃತ ವ್ಯಕ್ತಿ. ಇತನ ಕೊಲೆ ಮಾಡಿದ್ದು ಪತ್ನಿ ಸಾವಿತ್ರಿ ಇಟ್ನಾಳೆ (30). ಸಧ್ಯ ಗಂಡನ ಕೊಲೆ ಮಹಿಳೆ ಅಘಾತಕಾರಿ ಕಾರಣ ನೀಡಿದ್ದಾಳೆ.

ನನ್ನ ಸರಸಕ್ಕೆ ಕರೆಯುತ್ತಿದ್ದ, ನಾನು ನಿರಾಕರಿಸಿದ ಸಂದರ್ಭದಲ್ಲಿ ಆತ ಮಗಳ ಮೇಲೆ ಎರಗಲು ಯತ್ನಿಸಿದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿ ಪತ್ನಿ ಸಾವಿತ್ರಿ ಇಟ್ನಾಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಮಕ್ಕಳು ಮಲಗಿದ ಮೇಲೆ ಗಂಡನ ಮೇಲೆ‌ ಕಲ್ಲು‌ ಎತ್ತಿಹಾಕಿ ಕೊಲೆ‌ ಮಾಡಿದ್ದಾಳೆ. ಮನೆಯಲ್ಲಿ ಶವ ಇದ್ದರೆ ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದು ಹೆದರಿ ಒಬ್ಬಳಿಗೆ ಶವ ಸಾಗಿಸಲು ಸಾಧ್ಯವಾಗದಿದ್ದಾಗ ಗಂಡನ ಶವವನ್ನು ಕಲ್ಲಿನಿಂದ ಜಜ್ಜಿ‌ ತುಂಡರಿಸಿದ್ದಾಳೆ.

ದೇಹವನ್ನ ಎರಡು ಭಾಗ ತುಂಡರಿಸಿ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ ಸಾಗಿಸಿದ್ದು, ಬ್ಯಾರೆಲ್ ಉರುಳಿಸುತ್ತಾ ಶವ ಒಯ್ದು ಪಕ್ಕದ ಗದ್ದೆಗೆ ಹಾಕಿದ್ದಾಳೆ. ಕಟ್ ಮಾಡಿದ್ದ ದೇಹವನ್ನ ಮತ್ತೆ ಜೋಡಿಸಿದ ರೀತಿಯಲ್ಲಿ ಗದ್ದೆಗೆ ಎಸೆದಿರುವ ಪತ್ನಿ ನಂತರ
ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ತೊಳೆದು ಬಾವಿಗೆ ಎಸೆದಿದ್ದಾಳೆ.

ಮತ್ತೆ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆ ಒಂದು ಚೀಲದಲ್ಲಿ ಪ್ಯಾಕ್ ಮಾಡಿ,
ಆ ಚೀಲವನ್ನ ಬಾವಿಗೆ ತೆಗೆದುಕೊಂಡು ಹೋಗಿ ಮೇಲೆ ಬರದಂತೆ ಕಲ್ಲು ಕಟ್ಟಿ ಎಸೆದು ಮನೆಗೆ ವಾಪಸ್ಸಾಗಿದ್ದಾಳೆ.

ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿದ್ದ ಬಟ್ಟೆ ಸುಟ್ಟು ಹಾಕಿ. ಸುಟ್ಟಿದ್ದ ಬೂದಿಯನ್ನ ತಿಪ್ಪೆಗೆ ಎಸೆದು, ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್ ನಲ್ಲಿ ಬಚ್ಚಿಟ್ಟಿದ್ದಾಳೆ.ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು. ಈ ವೇಳೆ ಎಚ್ಚರಗೊಂಡ ಮೊದಲ ಮಗಳಿಗೆ ಎಲ್ಲಿಯೂ ಹೇಳದಂತೆ ತಾಕೀತು ಮಾಡಿದ್ದಾಳೆ.

ಜಮೀನಿನಲ್ಲಿ ಶವ ಸಿಗುತ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಗಂಡನನ್ನು ಕೊಲೆ‌ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಜೊತೆಗೆ ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸುವಂತೆ ಕಿರುಕುಳ ನೀಡುತ್ತಿದ್ದ ಇದೇ ಕಾರಣಕ್ಕೆ ‌ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.‌ ಆರೋಪಿಯನ್ನು ‌ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!