ಚುನಾವಣೆ ಹೊತ್ತಲ್ಲೇ ಬಿಜೆಪಿ ಶಾಸಕನ ಅಶ್ಲೀಲ ಪೋಟೋ ವೈರಲ್
ಬೆಳಗಾವಿ : ರಾಜ್ಯದಲ್ಲಿ ಸಧ್ಯ ಚುನಾವಣಾ ಕಾವು ಜೋರಾಗಿದ್ದು ಈ ಹಂತದಲ್ಲೇ ಬಿಜೆಪಿ ಶಾಸಕ ಮಹಿಳೆ ಜೊತೆ ಇದ್ದ ಅಶ್ಲೀಲ ಪೋಟೋ ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಅಶ್ಲೀಲ ಪೋಟೋ ಹರಿದಾಡುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ್ ಮಠಂದೂರು ಅವರು ಮಹಿಳೆ ಜೊತೆ ಇದ್ದ ಅಸಭ್ಯ ಪೋಟೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಇದಕ್ಕೆ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಯೊಂದಿಗಿನ ಫೋಟೋವನ್ನು ಅಲ್ಲಗೆಳೆದಿದ್ದು, ನನ್ನ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಫೋಟೋವನ್ನು ಯಾರೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು.
ಇದೀಗ ಈ ಫೋಟೋವನ್ನು ವೈರಲ್ ಮಾಡುತ್ತಿರುವವ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಇನ್ನು ಉಪ್ಪಿನಂಗಡಿ ಪೊಲೀಸರು ಇನ್ಫಾರ್ಮೇಶನ್ ಟೆಕ್ನಾಲಜಿ ಆಕ್ಟ್ ಪ್ರಕಾರ ಎಫ್.ಐ.ಆರ್ ದಾಖಲು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.