
ಸಾಲಗಾರರ ಕಾಟಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೈಲಹೊಂಗಲ : ಸಾಲಗಾರರ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬ ಬುಲೇರೋ ಗೂಡ್ಸ ವಾಹನಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಪಟ್ಟಣದ ಸಾಯಿ ಮಂದಿರ ಹತ್ತಿರದ ನಿವಾಸಿ ರಫೀಕ ಬಾಬುಸಾಬ ತಿಗಡಿ (38) ಸಾವನ್ನಪ್ಪಿದ್ದ ವ್ಯಕ್ತಿ.
ಕೆಲ ಖಾಸಗಿ ವ್ಯಕ್ತಿಗಳ ಕಡೆ 6ಲಕ್ಷ ಕ್ಕೂ ಹೆಚ್ಚು ಹಣ ಸಾಲ ಪಡೆಕೊಂಡಿದ್ದ ಎನ್ನಲಾಗಿದೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಲಗಾರರು ಪದೇ ಪದೇ ಮನೆಗೆ ಬಂದು ಕಿರುಕುಳ ನೀಡಿದ್ದರಿಂದ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಪತ್ರಿಕೆ ಮುಂದೆ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.