ಕುಮಠಳ್ಳಿಗೆ ಟಿಕೆಟ್ ; ಯಾಕಿಷ್ಟು ಚಡಪಡಿಸುತ್ತಿ ಲಕ್ಷ್ಮಣಣ್ಣ? ಸಾಹುಕಾರ್ ಟಾಂಗ್
ಬೆಳಗಾವಿ : ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಹೇಶ್ ಕುಮಠಳ್ಳಿ ಅವರಿಗೆ ಸಿಗುವ ವಿಶ್ವಾಸ ನನಗಿದೆ. ವಲಸೆ ಬಂದ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗುತ್ತದೆ. ವರಿಷ್ಠರ ನಿರ್ಧಾರದ ವರೆಗೂ ಕಾದು ನೋಡು ಲಕ್ಷ್ಮಣಣ್ಣ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದರು.
ಮಹಾರಾಷ್ಟ್ರದ ಸಿನ್ನೋಳಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು. ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೈ ತಪ್ಪುವ ಪ್ರಶ್ನೆ ಇಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ವಲಸೆ ಬಂದ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗುತ್ತದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ಕುಮಠಳ್ಳಿ ಸ್ಪರ್ಧಿಸಿದರೆ ಸೋಲುತ್ತಾರೆ ಎಂಬ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇವರು. ಚುನಾವಣೆ ಸೋಲು ಗೆಲುವು ದೇವರಿಗೆ ಬಿಟ್ಟಿದ್ದು. ಲಕ್ಷ್ಮಣ ಸವದಿ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಬೃಹತ್ ಮರದ ಹಾಗೆ ಬಿಜೆಪಿ ಹೈಕಮಾಂಡ್ ಇರುವಾಗ ನಾವು ಯಾವ ಗಿಡದ ತಪ್ಪಲು ಎಂದು ಸವದಿಗೆ ಟಾಂಗ್ ನೀಡಿದರು.