Select Page

ಉಳಿದ ಐದು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ? ಇಲ್ಲಿದೆ ನೋಡಿ ಸಂಭಾವ್ಯರ ಪಟ್ಟಿ

ಉಳಿದ ಐದು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ? ಇಲ್ಲಿದೆ ನೋಡಿ ಸಂಭಾವ್ಯರ ಪಟ್ಟಿ

ಬೆಳಗಾವಿ : ಈಗಾಗಲೇ ಬೆಳಗಾವಿಯ 13 ವಿಧಾನಸಭಾ ಕ್ಷೇತ್ರದ ಟಿಕೆಟ್ ಪಟ್ಟಿ ಬಿಡುಗಡೆ ಆಗಿದ್ದು ಇನ್ನುಳಿದ ಐದು ಕ್ಷೇತ್ರಕ್ಕೆ ಟಿಕೆಟ್ ಬಾಕಿ ಇದೆ. ಈ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಆತಂಕ ಸಂಭವನೀಯ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ.

ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಅಥಣಿ, ರಾಯಬಾಗ ಹಾಗೂ ಅರಭಾವಿ ಕ್ಷೇತ್ರಕ್ಕೆ ಟಿಕೆಟ್ ಪೈಪೋಟಿ ಜೋರಾಗಿದ್ದು ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಕಸರತ್ತು ಕಾಂಗ್ರೆಸ್ ನಡೆಸಿದೆ. ಸಾಮಾನ್ಯವಾಗಿ ಈ ಎಲ್ಲಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು ಬಂಡಾಯ ಬಾವುಟ ಏಳುವ ಸಾಧ್ಯತೆ ದಟ್ಟವಾದ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಘೊಷಿಸಲು ತಡ ಮಾಡುತ್ತಿದೆ.

01 ) ಅಥಣಿ ಕ್ಷೇತ್ರದಲ್ಲಿ ಬಿಜೆಪಿ ನಡುವೆ ಬಿರುಕು ಮೂಡಿದ್ದು ಇದರ ಲಾಭ ಪಡೆಯಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. ಬಿಜೆಪಿ ಅಭ್ಯರ್ಥಿ ನೋಡಿ ಇಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತದೆ ಎಂದು ಹೇಳಲಾಗುತ್ತಿದೆ.

ಅಥಣಿ – ಗಜಾನನ ಮಂಗಸೂಳಿ, ದರೆಪ್ಪ ಟಕ್ಕಣ್ಣವರ, ಸದಾಶಿವ ಬುಟಾಳಿ

02 ) ಅರಭಾವಿ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕಾ ಎಂಬ ಗೊಂದಲ ಮುಂದುವರಿದಿದ್ದು ಇಲ್ಲಿ ಟಿಕೆಟ್ ಆಕಾಂಕ್ಷಿರ ದಂಡಿದೆ. ಈ ಹಿನ್ನಲೆ ತಡ ಮಾಡಲಾಗುತ್ತಿದೆ.

ಅರಭಾವಿ – ಭೀಮಪ್ಪ ಗಡಾದ್, ಅರವಿಂದ್ ದಳವಾಯಿ, ಲಕ್ಕಣ್ಣ ಸವಸುದ್ದಿ

03 ) ರಾಯಬಾಗ – ಈಗಾಗಲೇ ರಾಯಬಾಗ ಟಿಕೆಟ್ ಆಕಾಂಕ್ಷಿ ಶಂಬು ಕಲ್ಲೋಳಕರ್ ಅವರ ಅಳಿಯ ಮಹೇಂದ್ರ ತಮ್ಮಣ್ಣವರ ಅವರಿಗೆ ಕುಡಚಿ ಟಿಕೆಟ್ ನೀಡಲಾಗಿದ್ದು ಈಗ ಇವರಿಗೆ ಟಿಕೆಟ್ ನೀಡುವುದು ಎಷ್ಟು ಸರಿ ಎಂಬ ಲೆಕ್ಕಾವಾರ ಕಾಂಗ್ರೆಸ್ ಹಾಕಿದ್ದು ಇಲ್ಲಿ ಟಿಕೆಟ್ ಹಂಚಿಕೆ ತಡವಾಗುತ್ತಿದೆ.

ರಾಯಬಾಗ – ಶಂಬು ಕಲ್ಲೋಳಿಕರ್, ಮಹಾವೀರ ಮೋಹಿತೆ

04 ) ಬೆಳಗಾವಿ ದಕ್ಷಿಣ – ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಡ ಇದ್ದು ಸಧ್ಯ ಕಾಂಗ್ರೆಸ್ ಬೆಳಗಾವಿ ಕ್ಷೇತ್ರದ ಟಿಕೆಟ್ ಹಂಚಿಕೆ ತಡ ಮಾಡುತ್ತಿದೆ. ಒಂದು ವೇಳೆ ಅರಭಾವಿಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ಬೆಳಗಾವಿ ದಕ್ಷಿಣದಲ್ಲಿ ಕೊಡುವ ಸಾಧ್ಯತೆ ದಟ್ಟವಾಗಿದೆ.

ಬೆಳಗಾವಿ ದಕ್ಷಿಣ – ರಮೇಶ್ ಕುಡಚಿ, ಪ್ರಭಾವತಿ ಮಸ್ತಮರಡಿ

05 ) ಬೆಳಗಾವಿ ಉತ್ತರ –  ಮಾಜಿ ಶಾಸಕ ಫಿರೋಜ್ ಸೇಠ್ ಅವರಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಡ ಇದ್ದರು ಕಾಂಗ್ರೆಸ್ ಈ ಬಾರಿ ಮರಾಠಾ ಅಸ್ತ್ರ ಅಥವಾ ಲಿಂಗಾಯತ ಅಭ್ಯರ್ಥಿಗೆ ಮನೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಆದರೆ ಕೊನೆ ಘಳಿಗೆಯಲ್ಲಿ ಫಿರೋಜ್ ಸೇಠ್ ಅಥವಾ ಸಹೋದರ ರಾಜು ಸೇಠ್ ಅವರಿಗೆ ಟಿಕೆಟ್ ನೀಡಬಹುದು ಎಂದು ಹೇಳಲಾಗುತ್ತಿದೆ.

ಬೆಳಗಾವಿ ಉತ್ತರ – ರಾಜು ಸೇಠ್, ಫಿರೋಜ್ ಸೇಠ್

Advertisement

Leave a reply

Your email address will not be published. Required fields are marked *