Select Page

ಕುಮಠಳ್ಳಿ ಬೆನ್ನಿಗೆ ನಿಂತ ಪ್ರಬಲ ಶಕ್ತಿ : ಅಥಣಿ ಟಿಕೆಟ್ ಪೈಪೋಟಿಗೆ ರೋಚಕ ತಿರುವು?

ಕುಮಠಳ್ಳಿ ಬೆನ್ನಿಗೆ ನಿಂತ ಪ್ರಬಲ ಶಕ್ತಿ : ಅಥಣಿ ಟಿಕೆಟ್ ಪೈಪೋಟಿಗೆ ರೋಚಕ ತಿರುವು?

ಬೆಳಗಾವಿ : ಸಧ್ಯ ಬಾರಿ ಕುತೂಹಲ ಮೂಡಿಸಿರುವ ಅಥಣಿ ಟಿಕೆಟ್ ಯಾರಿಗೆ ಎಂಬ ಗೊಂದಲದ ಮಧ್ಯೆ ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಪರ ಬ್ಯಾಟ್ ಬೀಸಲು ಪ್ರಬಲ ಶಕ್ತಿ ನಿಂತುಕೊಂಡಿದ್ದೆ. ಈ ಬೆಳವಣಿಗೆಯಿಂದ ಅಥಣಿ ಟಿಕೆಟ್ ಹಂಚಿಕೆ ವಿಚಾರ ಮಹತ್ವದ ತಿರುವು ಪಡೆದುಕೊಂಡಿದೆ.

ಅಥಣಿ ಟಿಕೆಟ್ ನನಗೆ ಎಂಬ ಅದಮ್ಯ ವಿಶ್ವಾಸದಲದಲಿರುವ ಲಕ್ಷ್ಮಣ ಸವದಿಗೆ ಕೊಂಚ ಹಿನ್ನಡೆ ಉಂಟಾಗಿದ್ದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಪರವಾಗಿ ಸಂಘಟನೆ ಪ್ರಮುಖ ನಾಯಕರು ಬ್ಯಾಟ್ ಬೀಸಿದ್ದು ಈ ಹಿಂದೆ ಇದ್ದ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಎರಡು ಸುತ್ತಿನ ಸಭೆ ಮುಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದದಲ್ಲಿ ಕೊನೆಯ ಸಭೆ ಬಳಿಕ ತಡರಾತ್ರಿ ಅಥವಾ ನಾಳೆ ಬಿಜೆಪಿ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಅಥಣಿ ಟಿಕೆಟ್ ವಿಚಾರವಾಗಿ ಮಾತನಾಡಿದ್ದ ಲಕ್ಷಣ ಸವದಿ. ಹೈಕಮಾಂಡ್ ನನಗೆ ಟಿಕೆಟ್ ಕೊಡುತ್ತಾರೆ. ಕುಮಠಳ್ಳಿಗೆ ಕೊಟ್ಟರೆ ಸೋಲುವ ಸಾಧ್ಯತೆ ಹೆಚ್ಚು ಎಂಬ ಮಾತನ್ನು ಆಡಿದ್ದರು.

ಈ ಮುಂಚೆ ರಮೇಶ್ ಜಾರಕಿಹೊಳಿ ಮಾತನಾಡಿ. ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ಕೊಡದಿದ್ದರೆ. ನಾನು ಚುನಾವಣೆ ಸ್ಫರ್ಧೆ ಮಾಡುವುದಿಲ್ಲ ಎಂಬ ವಾದ ಮಂಡಿಸಿದ್ದರು. ಈ ಹೇಳಿಕೆ ಹೈಕಮಾಂಡ್ ಮಟ್ಟದಲ್ಲಿ ಬಾರಿ ತಲೆನೋವಿಗೆ. ಕಾರಣವಾಗಿತ್ತು. ಒಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ಅಳೆದು ತೂಗಿ ಟಿಕೆಟ್ ಗೊಂದಲ ಬಗೆಹರಿಸುವ ಲೆಕ್ಕಾಚಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!