Select Page

Advertisement

ಗೊಮ್ಮಟೇಶ್ವರನಿಗೆ ಅವಮಾನ : ಅಯೂಬ್ ಖಾನ್ ನ್ಯಾಯಾಂಗ ಬಂಧನ

ಗೊಮ್ಮಟೇಶ್ವರನಿಗೆ ಅವಮಾನ : ಅಯೂಬ್ ಖಾನ್ ನ್ಯಾಯಾಂಗ ಬಂಧನ

ಮೈಸೂರು : ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದು ಫೆ. 23 ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.

ಹಿಜಾಬ್ ಮತ್ತು ಕೇಸರಿ ವಿವಾದ ಉಂಟಾದ ಸಂದರ್ಭದಲ್ಲಿ ಗೊಮ್ಮಟೇಶ್ವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಅಯೂಬ್ ಖಾನ್ ನನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿ ಮೈಸೂರಿನ 2 ನೇ ಜೆ ಎಮ್ ಎಫ್ ಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಜಡ್ಜ್ ಶ್ರೀಶೈಲಾ ಆರೋಪಿಯನ್ನು ಫೆಬ್ರವರಿ 23 ರ ವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದ್ದಾರೆ.

ಹಿಜಾಬ್ ವಿವಾದದ ಸಂದರ್ಭದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಹೇಳಿಕೆ ಕೊಡುವಾಗ ಆರೋಪಿ ಅಯೂಬ್ ಮಾತೃ ಸ್ವರೂಪಿ ಭಗವಾನ್ ಬಾಹುಬಲಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ವ್ಯಕ್ತಿ ವಿರುದ್ಧ ರಾಜ್ಯಾದ್ಯಂತ ಹಿಂದೂ ಹಾಗೂ ಜೈನ ಸಮುದಾಯದ ಅಸಂಖ್ಯಾತ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

Leave a reply

Your email address will not be published. Required fields are marked *