ನಿಲ್ಲದ ಕನ್ನಡಿಗರ ಕೂಗು : ಡಿಸಿಪಿ ಬದಲಾವಣೆಗೆ ಟ್ವಿಟರ್ ಸಮರ
ಬೆಳಗಾವಿ : ಕನ್ನಡ ಬಾವುಟ ಹಿಡಿದ ಯುವಕ ಮೇಲೆ ಹಲ್ಲೆ ಆರೋಪದಲ್ಲಿ ಪೊಲೀಸ್ ಅಧಿಕಾರಿ ಬದಲಾವಣೆಗೆ ಕನ್ನಡಿಗರ ಕೂಗು ಹೆಚ್ಚಾಗಿದ್ದು, ಟ್ವಿಟರ್ ನಲ್ಲಿ ಸಮರ ಮುಂದುವರಿದಿದೆ.
ಗಡಿಭಾಗ ಬೆಳಗಾವಿಯಲ್ಲಿ ಕನ್ನಡ ಅಸ್ಮಿತೆ ಎತ್ತಿ ಹಿಡಿಯುವ ಅಧಿಕಾರಿಗಳನ್ನು ನೇಮಕ ಮಾಡಬೇಕು. ಕನ್ನಡಿಗರ ವಿರುದ್ಧವೇ ನಿಲ್ಲುವ ಅಧಿಕಾರಿ ವರ್ಗಾವಣೆ ಮಾಡಬೇಕೆಂಬ ಕೂಗು ಹೆಚ್ಚಾಗುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಮುಂದುವರಿದಿದೆ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಎಂಬಂತೆ ಇಲ್ಲಿನ ನೆಲ, ಜಲದ ವಿಷಯದಲ್ಲಿ ಜಾತಿ ಬದಿಗಿಟ್ಟು ನಿರಂತರ ಹೋರಾಟ ಮಾಡುವ ಅದೆಷ್ಟೋ ಕೆಚ್ಚೆದೆಯ ಕನ್ನಡಿಗರ ಹಿತರಕ್ಷಣೆ ಮಾಡುವಂತ ನಾಯಕರ ಅವಶ್ಯಕತೆ ನಮಗಿದೆ ಎಂಬ ಕೂಗು ಜೋರಾಗತೊಡಗಿದೆ. ಜೊತೆಗೆ ಕನ್ನಡ ಹೋರಾಟಗಾರರ .ಮೇಲೆ ಹಲ್ಲೆ ಮಾಡುವ ಅಧಿಕಾರಿ ಮೇಲೆ ಕ್ರಮಕ್ಕೂ ಆಗ್ರಹ ವ್ಯಕ್ತವಾಗಿದೆ.
ಜತೆಗೆ ಹಿಂದಿನ ಡಿಸಿಪಿ ಸೀಮಾ ಲಾಟ್ಕರ, ಹೇಮಂತ ನಿಂಬಾಳ್ಕರ, ಸಂದೀಪ ಪಾಟೀಲ್ ಅವರನ್ನು ಮಿಸ್ ಮಾಡಿಕೊಳುವುದಾಗಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.