Select Page

Advertisement

ಸರ್ಕಾರಿ ಶಾಲಾ ಶಿಕ್ಷಕ ಈಗ ಅಬಕಾರಿ ಅಧೀಕ್ಷಕ

ಸರ್ಕಾರಿ ಶಾಲಾ ಶಿಕ್ಷಕ ಈಗ ಅಬಕಾರಿ ಅಧೀಕ್ಷಕ
Advertisement

ಬೆಳಗಾವಿ : ಸರ್ಕಾರಿ ಪ್ರೌಢಶಾಲಾ ಶಿಕ್ಷರಾಗಿ ವೃತ್ತಿ ಬದುಕು ಆರಂಭಿಸಿ ಸಧ್ಯ ಅಬಕಾರಿ ಅಧಿಕರಾಗಿ ಆಯ್ಕೆಯಾಗಿ, ಒಬ್ಬ ಸಾಮಾನ್ಯ  ಮನುಷ್ಯ ಮನಸ್ಸು ಮಾಡಿದರೆ ಜೀವನದಲ್ಲಿ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಬಾಹುಬಲಿ ಸಾಕ್ಷಿಯಾಗಿದ್ದಾರೆ.

ಹೌದು ಮೂಲತಃ ಮುಗಳಖೋಡ ಗ್ರಾಮದ ಬಾಹುಬಲಿ ಹುಲ್ಲೋಳ್ಳಿ ಅವರು 2004 – 05 ರಲ್ಲಿ ಇಂದಿನ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಲಗೋಡ ಪ್ರೌಢ ಶಾಲಾ ಶಿಕ್ಷಕರಾಗಿ ತಮ್ಮ‌ ವೃತ್ತಿ ಜೀವನ ಆರಂಭಿಸಿದರು. ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ನಿರಂತರ ಓದಿನ ಮೂಲಕ ಏನಾದರೂ ಸಾಧಿಸಬೇಕೆಂಬ ಛಲದಿಂದ ಕರ್ನಾಟಕ ಲೋಕಸೇವಾ ಪರೀಕ್ಷೆಗೆ ಸಿದ್ಧರಾದರು. 2008 ರಲ್ಲಿ ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಅಬಕಾರಿ ಉಪ ನಿರೀಕ್ಷಕರಾಗಿ ಆಯ್ಕೆಯಾದರು.

ಇಷ್ಟಕ್ಕೆ ಸುಮ್ಮನಾಗದ ಬಾಹುಬಲಿ ಅನೇಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ಅಧಿಕಾರದಲ್ಲಿ ತೇರ್ಗಡೆ ಹೊಂದಿ 2012 ರಲ್ಲಿ ಇಳಕಲ್ ತಾಲೂಕು ಅಬಕಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 2016 ರಲ್ಲಿ ಬೆಂಗಳೂರಿನಲ್ಲಿ ಅಬಕಾರಿ ಉಪ ಅಧೀಕ್ಷಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಸಧ್ಯ ಅಬಕಾರಿ ಪೊಲೀಸ್ ಅಧೀಕ್ಷಕರಾಗಿ ಪದೋನ್ನತಿ ಪಡೆದಿದ್ದು ಆಧ್ಯಾತ್ಮಿಕ ಶ್ರೀಮಂತಿಕೆ ಹೊಂದಿರುವ ಮುಗಳಖೋಡ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಬಡ ರೈತ ಕುಟುಂಬದಲ್ಲಿ ಜನಿಸಿದ್ದ ಬಾಹುಬಲಿ ಚಿಕ್ಕವರಿದ್ದಾಗಲೇ ಬಹಳ ಪ್ರತಿಭಾನ್ವಿತ ಯುವಕ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಇವರ ಹಸಿವು ಈ ಮಟ್ಟಿಗೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಬಾಹುಬಲಿ ತಂದೆ ಪರಪ್ಪ ಹುಲ್ಲೋಳ್ಳಿ. ಮಕ್ಕಳು ವಿದ್ಯಾವಂತರಾಗಿ ಬೆಳೆದರೆ ನಮ್ಮ ಮನೆತನಕ್ಕೆ ಮಾತ್ರವಲ್ಲ ಸಮಾಜಕ್ಕೂ ಉಪಯುಕ್ತ. ಆ ನಿಟ್ಟಿನಲ್ಲಿ ನಮ್ಮ ಮಕ್ಕಳು ಸಾಧನೆ ಮಾಡಿದ್ದಾರೆ ಎನ್ನುತ್ತಾರೆ ಇವರು.

ಒಂದೇ ಕುಟುಂಬದ ಮೂವರು ಸಹೋದರರು ಉನ್ನತ ಹುದ್ದೆ : ಪರಪ್ಲ, ಅಕ್ಕಾತಾಯಿ ಕಲ್ಲೋಳ್ಳಿ ಅವರ ಮೂವರು ಮಕ್ಕಳಾದ ಬಾಹುಬಲಿ ಕಲ್ಲೋಳ್ಳಿ ಅಬಕಾರಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಸಿದ್ದು ಹುಲ್ಲೋಳ್ಳಿ ಜಮಖಂಡಿ ಉಪ ವಿಭಾಗಾಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಜೊತೆಗೆ ಪಾರೀಸ್ ಹುಲ್ಲೋಳ್ಳಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದು ಒಂದೇ ಕುಟುಂಬದ ಮೂವರು ಮಹತ್ವದ ಹುದ್ದೆ ಅಲಂಕರಿಸುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.

ಆಧ್ಯಾತ್ಮಿಕ ಶ್ರೀಮಂತಿಕೆ ಹೊಂದಿರುವ ಮುಗಳಖೋಡ ಪಟ್ಟಣದ ಬಾಹುಬಲಿ ಅವರ ಸಾಧನೆಗೆ ಹೆಮ್ಮೆ ಇದೆ. ರೈತ ಕುಟುಂಬದ ಹಿನ್ನಲೆ ಇದ್ದರು ನಿರಂತರ ವಿದ್ಯಾಭ್ಯಾಸದ ಮೂಲಕ ಸಾಧನೆ ಶಿಖರ ಏರಿರುವ ಇಂತಹ ಯುವಕರು ಸಮಾಜಕ್ಕೆ ದಾರಿದೀಪ. ಮುಂದೆ ಮತ್ತಷ್ಟು ಮಹತ್ವದ ಹುದ್ದೆ ಅಲಂಕರಿಸಿದ ಜಿಲ್ಲೆಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಶಕ್ತಿ ಅವರಿಗೆ ಸಿಗಲಿ.‌

ಮುರುಘರಾಜೇಂದ್ರ ಮಹಾಸ್ವಾಮೀಜಿ
ಮುಗಳಖೋಡ ಜಿಡಗಾ ಮಠ

ಸತತವಾದ ಪ್ರಯತ್ನ ಹಾಗೂ ಶ್ರದ್ಧೆಯಿಂದ ನಮ್ಮ ಕೆಲಸ ಮಾಡಿದರು ಜೀವನದಲ್ಲಿ ಯಶಸ್ಸು ಎಂಬುದು ತಾನಾಗಿಯೇ ಬರುತ್ತದೆ. ಈ ಹಿಂದಿನಿಂದಲೂ ನಾನು ಪ್ರಾಮಾಣಿಕ ಸೇವೆ ಸಲ್ಲಿಸಿದ ಪರಿಣಾಮ ಸಧ್ಯ ಪೊಲೀಸ್ ಅಧೀಕ್ಷಕ ಹುದ್ದೆ ಅಲಂಕರಿಸಲು ಸಹಕಾರಿಯಾಗಿದೆ. ಗ್ರಾಮದ ಜನರು ಹಾಗೂ ಪೂಜ್ಯ ಶ್ರೀಗಳ ಆಶಿರ್ವಾದ ಈ ಸಾಧನೆಗೆ ಕಾರಣ.

ಬಾಹುಬಲಿ ಹುಲ್ಲೋಳ್ಳಿ
ಅಬಕಾರಿ ಪೊಲೀಸ್ ಅಧೀಕ್ಷಕ ಬೆಂಗಳೂರು

ವಿನಾಯಕ

Advertisement

Leave a reply

Your email address will not be published. Required fields are marked *

error: Content is protected !!