ಕಾಗವಾಡ : ನವಜಾತ ಶಿಶಿವಿನ್ನು ಕಾಲುವೆಗೆ ಎಸೆದ ಅಮಾನವೀಯ ಘಟನೆ ತಾಲೂಕಿನ ಮೋಳೆ ಗ್ರಾಮದ ಕವಲಗುಡ್ಡ ರಸ್ತೆ ಪಕ್ಕದಲ್ಲಿ ನಡೆದಿದೆ.
ಶುಕ್ರವಾರ ಕೌಲಗುಡ್ಡ-ಮೋಳೆ ರಸ್ತೆ ಮಧ್ಯದ ಬೋರಗಾಂವೆ ತೋಟದ ಬಳಿ ಐನಾಪೂರ ಯಾತ ನೀರಾವರಿ ಕಾಲುವೆಯಲ್ಲಿ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ಕೆಲಸಗಾರಿಗೆ ನವಜಾತ ಹೆಣ್ಣು ಶಿಶುವಿನ ಮೃತದೇಹ ಕಂಡುಬಂದಿದೆ.
ಕೂಡಲೇ ಗ್ರಾಮದ ಮುಖಂಡರಿಗೆ ಮತ್ತು ಕಾಗವಾಡ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಗಡಿಯಲ್ಲಿ ಮತ್ತೊಂದು ಮನಕುಲುಕುವ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬಿಳಿಸಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ, ನಿಂತ ನೀರಿನಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಶಿಶು ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ಸದಲಗೆ ಹಾಗೂ ಕಾಗವಾಡ ಪೋಲಿಸ್ ಠಾಣೆಯ ಪಿಎಸ್‌ಐ ಜಿ.ಜಿ. ಬಿರಾದರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಥಳಕ್ಕೆ ಅಥಣ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಶ ಹಳ್ಳೂರ ಭೇಟಿನೀಡಿ ಪರಿಶೀಲನೆ ನಡೆಸಿದೆ.


