ನ.13 ಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ; ಯಾರ ಕೈ ಮೇಲುಗೈ….?
ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಬರುವ ನ.13 ರಂದು ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠೆ ಹೊಂದಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿಗೆ ಈಗಾಗಲೇ ಅನೇಕರು ಟವಲ್ ಹಾಕಿದ್ದಾರೆ. ಈ ಮಧ್ಯೆ ಏಕಾಏಕಿ ರಾಜೀನಾಮೆ ನೀಡುವ ಮೂಲಕ ಅಧ್ಯಕ್ಷ ಸ್ಥಾನ ತ್ಯಜಿಸಿದ್ದ ರಮೇಶ್ ಕತ್ತಿ ಅವರ ನಿಲುವು ಏನು ಎಂಬ ಕುತೂಹಲ ಮೂಡಿಸಿದೆ.
ಅಧ್ಯಕ್ಷ ಹುದ್ದೇ ಮೇಲೆ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕಣ್ಣಿಟ್ಟಿದ್ದು ಇತ್ತ ಲಕ್ಷ್ಮಣ ಸವದಿ & ಬಾಲಚಂದ್ರ ಜಾರಕಿಹೊಳಿ ಅವರ ಅಭಿಪ್ರಾಯಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ಹಿನ್ನಲೆಯಲ್ಲಿ ಮುಂದಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಯಾರ ಮುಡಿಗೆ ಎಂಬು ಕುತೂಹಲ ಎಲ್ಲರಲ್ಲೂ ಇದೆ.