ಬೆಳಗಾವಿ : ರಾಜಕಾರಣಿಗಳಿಗೆ ತಮ್ಮ ದೈನಂದಿನ ಕಾರ್ಯಗಳ ಮಧ್ಯೆ ಫ್ನಿಟ್ನೆಸ್ ಕಾಯ್ದುಕೊಳ್ಳುವುದು ಸಣ್ಣ ವಿಷಯವಲ್ಲ. ಆದರೆ ಇದಕ್ಕೆ ಭಿನ್ನ ಎಂಬುವಂತೆ ಸವದತ್ತಿ ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯ ಅವರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಶರೀರದ ತೂಕದಲ್ಲಿ ಸಾಕಷ್ಟು ಕಡಿಮೆ ಮಾಡಿಕೊಂಡಿರುವ ಶಾಸಕ ವಿಶ್ವಾಸ್ ವೈದ್ಯ ಅವರು ಈಗ ಫಿಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಧ್ಯ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕಾಗಿ ಮಾಡಿದ ತಯಾರಿ ಕುರಿತು ಶಾಸಕರೇ ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕಿದೆ.




