Select Page

ಜಂಟಿ ಪಾಟೀಲರ ಸೇವೆ ಮರೆಯಲು ಸಾಧ್ಯವೇ ಬೆಳಗಾವಿ ಜನ

ಜಂಟಿ ಪಾಟೀಲರ ಸೇವೆ ಮರೆಯಲು ಸಾಧ್ಯವೇ ಬೆಳಗಾವಿ ಜನ

ಬೆಳಗಾವಿ : ಅಧಿಕಾರಿಗಳು ಮನಸ್ಸು ಮಾಡಿದರೆ ಏನೆಲ್ಲ ಬದಲಾವಣೆ ತರಲು ಸಾಧ್ಯ ಎಂಬುದನ್ನು ಈ ಇಬ್ಬರು ಅಧಿಕಾರಿಗಳು ತಮ್ಮ ಆಡಳಿತಾವಧಿಯಲ್ಲಿ ಬೆಳಗಾವಿ ಜನರಿಗಾಗಿ ಸಲ್ಲಿಸಿದ ಸೇವೆಯನ್ನು ಬೆಳಗಾವಿ ಜಿಲ್ಲೆಯ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಈ ಹಿಂದೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಡಾ. ಸಂಜೀವ್ ಪಾಟೀಲ್ ಅವರು,‌ ನಿಕಟಪೂರ್ವ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ವರ್ಗಾವಣೆ ಆಗಿದ್ದಾರೆ. ಈ ಇಬ್ಬರು ಅಧಿಕಾರಿಗಳು ಬೆಳಗಾವಿಯಲ್ಲಿ ಸಲ್ಲಿಸಿರುವ ಸೇವೆಯನ್ನು ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬೆಳಗಾವಿ ಪೊಲೀಸ್ ಆಡಳಿತ ಜನಸ್ನೇಹಿ ಅಗಿರಬೇಕೆಂದು ಅಂದಿನ ಎಸ್ಪಿಯ ಫೋನ್ ಇನ್ ಕಾರ್ಯಕ್ರಮ ಮೂಲಕ ಜಿಲ್ಲೆಯ ಜನರ ಮನೆಮಾತಾಗಿದ್ದ ಐಪಿಎಸ್ ಅಧಿಕಾರಿ ಡಾ. ಸಂಜೀವ್ ಪಾಟೀಲ್ ಅವರು ವರ್ಗಾವಣೆ ನಂತರವೂ ಜನ ಈಗಲೂ ಅವರ ಆಡಳಿತ ವೈಖರಿಯನ್ನು ಮನದಲ್ಲಿ ಇಟ್ಟುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಬ್ಬ ಹಿರಿಯ ಅಧಿಕಾರಿ ನಿತೇಶ್ ಪಾಟೀಲ್ ಅವರ ವರ್ಗಾವಣೆಯಾಗಿದೆ. ಚುನಾವಣೆ ಮತ್ತು ಅಚ್ಚುಕಟ್ಟಾಗಿ ಅಧಿವೇಶನ ನಡೆಸುವಲ್ಲಿ ಇವರ ಪಾತ್ರ ಪ್ರಮುಖ.

ನಿತೇಶ್ ಪಾಟೀಲ್ ಅವರ ಆಡಳಿತಾವಧಿ ಸಂದರ್ಭದಲ್ಲಿ ಜನಪರ ಕಾರ್ಯ ಕೈಗೊಳ್ಳುವ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ಎರಡು ಬಾರಿ ಬೆಳಗಾವಿಯ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ನೀಡಿದ ಸಹಕಾರವನ್ನು ಜನ ಈಗಲೂ ನೆನೆಸುತ್ತಾರೆ.

ಇನ್ನೂ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಿತೇಶ್ ಪಾಟೀಲ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ಅಷ್ಟೇ ಅಲ್ಲದೆ 18 ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ವಿಧಾನಸಭೆ ಹಾಗೂ ಲೋಕಸಭಾ

ಚುನಾವಣೆಯನ್ನು ಯಾವುದೇ ಗೊಂದಲ ಇಲ್ಲದೆ ನಡೆಸಿದ್ದು ಇವರ ಹೆಗ್ಗಳಿಕೆ. ಜೊತೆಗೆ ಭ್ರೂಣ ಹತ್ಯೆ ಮತ್ತು ನಕಲಿ ವೈದ್ಯರ ವಿರುದ್ಧ ಕ್ರಮಕ್ಕೂ ಹಿಂಜರಿಯದೆ ಮಾಡಿದ ಸೇವೆಯನ್ನು ಬೆಳಗಾವಿ ಜನ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಇಬ್ಬರು ಪಾಟೀಲರ ಜುಗಲ್ ಬಂದಿಯ ಸೇವೆಯನ್ನು ಬೆಳಗಾವಿ ಜನ ಯಾವತ್ತೂ ಮರೆಯಲು ಸಾಧ್ಯವಿಲ್ಲ. ತಮ್ಮ ಆಡಳಿತಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ರೀತಿಗೆ ಜನ ಯಾವತ್ತೂ ಕೃತಜ್ಞರಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!