Select Page

ಕನ್ನಡದ ಕಂದನಿಗೆ ಹುಟ್ಟು ಹಬ್ಬದ ಸಂಭ್ರಮ

ಕನ್ನಡದ ಕಂದನಿಗೆ ಹುಟ್ಟು ಹಬ್ಬದ ಸಂಭ್ರಮ

ಕನ್ನಡ ಬೆಳೆಸುವ ಕೆಲಸಕ್ಕಿಂತ ಕನ್ನಡ ಬಳಸುವ ಕೆಲಸ ಸದ್ಯ ನಡೆಯಬೇಕಿರುವುದು. ವೈಯಕ್ತಿಕ ಜಂಜಾಟಗಳ ಮಧ್ಯೆ ಭುವನೇಶ್ವರಿ ದೇವಿಯ ಪೂಜೆಯನ್ನು ನಿರಂತರವಾಗಿ ಮಾಡುತ್ತ, ಅವಳ ಸೇವೆಗೆ ಸದಾಕಾಲವೂ ದುಡಿಯುವ ಯುವಕ ದೀಪಕ್ ಗುಡಗನಟ್ಟಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಯಾವುದೇ ಪೂರ್ವಾಪರ ಇಲ್ಲದೆ ಬರೆಯುತ್ತಿರುವ ಅಕ್ಷರಗಳಿವು. ಬೆಳಗಾವಿಯಂತಹ ಗಡಿ ಭಾಗದ ಜಿಲ್ಲೆಯಲ್ಲಿ ಕನ್ನಡಿಗರು ಧೈರ್ಯದಿಂದ ಬದುಕುತ್ತಿದ್ದರೆ ಇದು ಕನ್ನಡಪರ ದ್ವನಿ ಎತ್ತುವ ಹೋರಾಟಗಾರರ ಫಲ ಎಂದರೆ ತಪ್ಪಾಗಲಾರದು. ಇದೇ ಹಾದಿಯಲ್ಲಿ ನಿರಂತರ ಕನ್ನಡ ಸೇವೆಗೆ ನಿಲ್ಲುವ ಯುವಕ ದೀಪಕ್ ಗುಡಗನಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ.

ಬೆಳಗಾವಿ ಕರವೇ ಸಾರಥಿ ದೀಪಕ್ – ಬೆಳಗಾವಿ ಜಿಲ್ಲೆಯಲ್ಲಿನ ಕನ್ನಡಪರ ಸಂಘಟನೆ ಸದಸ್ಯರು ಗುಡುಗಿದರೆ ರಾಜ್ಯದ ರಾಜಧಾನಿ ಬೆಂಗಳೂರು ನಡುಗುವುದರಲ್ಲಿ ಅನುಮಾನವಿಲ್ಲ. ಕನ್ನಡ ಅಸ್ಮಿತೆಗೆ ದಕ್ಕೆ ಬಂದಾಗ ಮುಂದೆ ನಿಂತು ಹೋರಾಡುವ ದೀಪಕ್ ಸದ್ಯ ಕರವೇ ಜಿಲ್ಲಾಧ್ಯಕ್ಷರು. ಇವರ ನೇರ ಮಾತುಗಾರಿಕೆ ಹಾಗೂ ಹೋರಾಟದ ಶಕ್ತಿಯಿಂದ ಪ್ರಭಾವಿತರಾದ ಯುವಕರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನ್ನಡ ಸೇವೆಗೆ ನಿಂತಿರುವುದು ಸತ್ಯ.‌

ಹೋರಾಟವೇ ಇವರ ಶಕ್ತಿ : ದೀಪಕ್ ಗುಡಗನಟ್ಟಿ ಇದ್ದಲ್ಲಿ ಒಂದು ಗಟ್ಟಿಯಾದ ಧ್ವನಿ ಇರುತ್ತದೆ. ಜೊತೆಗೆ ಕನ್ನಡಪರವಾದ ನಿಲುವು ಇರುತ್ತದೆ. ಅಷ್ಟೇ ಅಲ್ಲದೆ ಯುವ ಶಕ್ತಿಯೂ ಇವರ ಬಳಿ ಇರುತ್ತದೆ. ಇದೆಲ್ಲದರ ಕಾರಣಕ್ಕಾಗಿ ದೀಪಕ್ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡಕ್ಕಾಗಿ ಹೋರಾಡುವ ಇವರ ಮೇಲೆ ಸಾಲು ಸಾಲು ಪ್ರಕರಣಗಳಿದ್ದರೂ ಇದಕ್ಕೆ ತಕೆಡಿಸಿಕೊಳ್ಳದೆ ತಮ್ಮ ಕಾಯಕವನ್ನು ಮುಂದುವರಿಸಿಕೊಂಡು ಸಾಗುತ್ತಿರುವುದು ಮೆಚ್ಚುವ ಸಂಗತಿ ಎಂದರೆ ತಪ್ಪಾಗಲಾರದು.

ಒಟ್ಟಿನಲ್ಲಿ ಕನ್ನಡ ಸೇವೆಯಲ್ಲಿ ತೊಡಗಿಕೊಂಡ ಜಿಲ್ಲೆಯ ಉತ್ಸಾಹಿ ಯುವಕ ಹಾಗೂ ಕರವೇ ಜಿಲ್ಲಾಧ್ಯಕ್ಷ ದೀಪಕ್
ಗುಡಗನಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Advertisement

Leave a reply

Your email address will not be published. Required fields are marked *

error: Content is protected !!