ಅಶೋಕನನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ… ಪ್ರೇಯಸಿಯ ಎಚ್ಚರಿಕೆ
ಹಾಸನ : ಸಾಮಾನ್ಯವಾಗಿ ಹಾಸನ ಎಂದರೆ ನೆನಪಾಗುವುದು ರಾಜಕೀಯ ಬೆಳವಣಿಗೆಯಿಂದ ಆದರೆ ಈ ಬಾರಿ ವಿಭಿನ್ನ ಘಟನೆಗೆ ಸಾಕ್ಷಿಯಾಗಿದೆ. ಯುವಕನೋರ್ವನ ಜೋಡಿ ಪ್ರೀತಿಯಿಂದ ನಡೆದ ಅವಘಡವನ್ನು ನೀವು ಒಮ್ಮೆ ಕೇಳಿದರೆ ಆಶ್ಚರ್ಯ ಆಗುವುದಂತು ಸತ್ಯ.
ಹೌದು. ಕಾಲೇಜಿಗೆ ಹೋಗುವಾಗ ಅದೇಷ್ಟು ಯುವಕರು ಒಬ್ಬಳು ಕೈ ಕೊಟ್ಟರೆ ಇನ್ನೊಬ್ಬಳ ಜೊತೆ ಓಡಾಡಬಹುದು ಎಂದು ಅಂದುಕೊಂಡವರೆ ಹೆಚ್ಚು. ಆದರೆ ಇಲ್ಲೊಬ್ಬ ಕಿಲಾಡಿ ಯುವಕ ಇಬ್ಬರ ಯುವತಿಯನ್ನು ಪ್ರೀತಿಸಿ ಕೊನೆಗೆ ಒಬ್ಬಳನ್ನು ಮದುವೆಯಾಗಿದ್ದಾನೆ. ಹಾಗಿದ್ದರೆ ಏನ್ ಸ್ಟೋರಿ ಓದಿ ಕೆಳಗೆ.
ಇಬ್ಬರ ಯುವತಿಯನ್ನು ಪ್ರೀತಿಸುತ್ತಿದ್ದ ತ್ರಿಕೋನ ಲವ್ ಕಹಾನಿಗೆ ಅಸಲಿ ತಿರುವುದು ಸಿಕ್ಕಿದ್ದು, ಇಬ್ಬರೂ ಯುವತಿಯರು ಮದುವೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಹಿರಿಯರ ಸಮ್ಮುಖದಲ್ಲಿ ರಾಜಿಪಂಚಾಯತಿ ನಡೆಸಿ. ಈ ನಡುವೆ ಒಬ್ಬ ಯುವತಿ ನನ್ನನ್ನೇ ಮದುವೆಯಾಗಬೇಕೆಂದು ಪಟ್ಟು ಹಿಡಿದು ವಿಷ ಸೇವಿಸಿ ಒತ್ತಾಯ ಮಾಡುತ್ತಿದ್ದಳು. ಸಂದಾನ ಫಲ ಕೊಡದೆ ಹಿರಿಯರು ಲಾಟರಿ ಮೂಲಕ ಯುವಕನನ್ನು ಮುದುವೆಯಾಗಲು ನಿರ್ಧರಿಸಿದರು.
ಅಷ್ಟೊತ್ತಿಗೆ ಯುವಕನೇ ಒಂದು ನಿರ್ಧಾರಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನೇ ಮದುವೆಯಾಗುವುದಾಗಿ ಹೇಳಿದ. ಇದರಿಂದ ಕೋಪಗೊಂಡ ಇನ್ನೊಬ್ಬ ಯುವತಿ ಯುವಕನ ಕಪಾಳಕ್ಕೆ ಹೊಡೆದು, ಯುವಕ ಮದುವೆಯಾಗಲು ಒಪ್ಪಿದ್ದ ಯುವತಿಯ ಬಳಿ ಬಂದು ನಿನ್ನ ಮೇಲೆ ನನಗೆ ಕೋಪ ಇಲ್ಲ. ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸು. ನಿನ್ನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದಳು.
ಅಷ್ಟೆ ಅಲ್ಲದೆ, ನನಗೆ ಮೋಸ ಮಾಡಿರುವ ಅವನಿಗೆ ನಾನು ಬಿಡುವುದಿಲ್ಲ ಎಂದು ಹೇಳಿದ ಇನ್ನೊಬ್ಬ ಯುವತಿ, ನಾನು ನೀನು ಇಬ್ಬರು ಚೆನ್ನಾಗಿರಬೇಕು. ನಾವಿಬ್ಬರು ಎಲ್ಲೇ ಸಿಕ್ಕರೂ ಮಾತನಾಡಿಸೊಣ. ಇಷ್ಟು ದಿನಾ ಆಗಿದ್ದು ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ. ನೀನು ಒಂದು ಹೆಣ್ಣು ನಿನಗೂ ಮೋಸ ಆಗಬಾರದು. ಮದುವೆಯಾದ ಬಳಿಕ ನೀನು ಚನ್ನಾಗಿರುತ್ತಿಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಮಾತ್ರ ಚನ್ನಾಗಿದ್ದು ತೋರಿಸುತ್ತೇನೆ. ನಾನೇನದರೂ ಮುಂದೆ ಹೇಳುತ್ತೇನೆ. ಅಶೋಕನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇನ್ನೊಬ್ಬ ಯುವತಿ ವಾರ್ನಿಂಗ್ ಮಾಡಿದ ಬಳಿಕ ವಿಷ ಸೇವಿಸಿದ ಯುವತಿಯ ಜೊತೆ ಯುವಕ ಮದುವೆಯಾಗಿ ಬಂಪರ್ ಲಾಟರಿ ಹೊಡೆದಿದ್ದಾನೆ.
ಪ್ರೀತಿ ಮಾಯೇ ಹುಷಾರು. ಕಣ್ಣೆ ಮಾರು ಬಜಾರು. ಕೊನೆಗೆ ಅಶೋಕನ ಬಾಳಲ್ಲಿ ಬಂದ ಸಾಂಗ್ ತೆರೆಯೋ ಮಂಜಿನ ಹನಿಯಾ.. ಎರಡೂ ದೋಣಿಯ ಮೇಲೆ ಪಯಣ ಮಾಡುವವಿಗೆ ಒಂದೇ ಹಳಿಗೆ ತಂದ ಇನ್ನೊಬ್ಬ ಯುವತಿಯ ದೈರ್ಯ ಮೆಚ್ಚಲೆ ಬೇಕು. ಪ್ರೀತಿ ಮಾಡೋವಾಗ ಯುವಕ, ಯುವತಿಯರು ನೋಡಿ ಮಾಡಿ.