
ಯಾರ ಬಾಯಿಗೆ ಬೆಳಗಾವಿ ಕುಂದಾ….?

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದ್ದು, ನಗರದ ಬಿ.ಕೆ ಮಾಡಲ್ ಶಾಲೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 58 ವಾರ್ಡುಗಳಿಗೆ ನಡೆದ ಮತದಾನದ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದೆ. ಒಟ್ಟು 385 ಅಭ್ಯರ್ಥಿಗಳು ಕಣದಲ್ಲಿದ್ದು ಜಯದ ಮಾಲೆ ಯಾರಿಗೆ ಎಂಬ ಕುತೂಹಲ ಎಲ್ಲೆಡೆ ಆವರಿಸಿದೆ. ಈ ಬಾರಿ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ಚಿನ್ಹೆಯ ಮೇಲೆ ಚುನಾವಣೆ ಎದುರಿಸಿದ್ದು ಎರಡುವರೆ ದಶಕಗಳ ನಂತರ ಹೊಸ ಪ್ರಯತ್ನ ನಡೆದಿದೆ. ಸಪ್ಟೆಂಬರ್ 3 ರಂದು ನಡೆದ ಪಾಲಿಕೆ ಮತದಾನದಲ್ಲಿ ಒಟ್ಟು 50.14 ರಷ್ಟು ಮತದಾನವಾಗಿದೆ.
ಅಧಿಕಾರದ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್ ಕನಸು ಕಾಣುತ್ತಿದ್ದು ಮತದಾರ ಯಾರ ಮಡಿಲಿಗೆ ಗೆಲುವಿನ ಹಾರ ಹಾಕುತ್ತಾನೆ ಎಂಬುದನ್ನು ನಾಳೆಯವರೆಗೆ ಕಾದು ನೋಡಬೇಕು. ಒಟ್ಟಿನಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಸಂಪೂರ್ಣ ವಿವರವನ್ನು ನಮ್ಮ ಬೆಳಗಾವಿ ವಾಯ್ಸ್ ನಲ್ಲಿ ನೀಡಲಾಗುತ್ತದೆ.
ಬೆಳಗಾವಿ ಮಹಾನಗರ ಪಾಲಿಕೆಯ ಕ್ಷಣ ಕ್ಷಣದ ಅಪ್ಡೇಟ್ ಪಡೆಯಲು ನಮ್ಮ What’s App ಗ್ರುಪ್ ಸೇರಿ – https://chat.whatsapp.com/H8bMnu7sdb645AO4X57ZRe