
ಠಾಣೆಯಲ್ಲಿ ಪೊಲೀಸರ ಮುಂದೆ ಮೋಬೈಲ್ ಕದ್ದ ಕಿಲಾಡಿ ; ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಗದಗ : ಪೊಲೀಸ್ ಠಾಣೆಯಲ್ಲಿ ಪೊಲೀಸರ ಮುಂದೆಯೇ ಮೋಬೈಲ್ ಕಳ್ಳತನ ಮಾಡಿರುವ ಘಟನೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಹಿಳಾ ಸಿಬ್ಬಂದಿ ಜೊತೆ ಮಾತನಾಡ್ತಾ ಅವರದ್ದೇ ಮೊಬೈಲ್ ಅನ್ನು ಕಳ್ಳ ಕದ್ದು ಎಸ್ಕೆಪ್ ಆಗಿದ್ದಾನೆ. ಖದೀಮನ ಕೈಚಳಕ ಸ್ಟೇಷನ್ ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಪೊಲೀಸ್ ಸ್ಟೇಷನ್ ಗೆ ಬಂದಿದ್ದ ಮುಲ್ಲಾ. ಮಹಿಳಾ ಸಿಬ್ಬಂದಿ ಜೊತೆ ಮಾತನಾಡುತ್ತಲೇ ಮೊಬೈಲ್ ಗೆ ಕೈ ಹಾಕಿದ್ದಾನೆ.
ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ನಿಂತು ಮೊಬೈಲ್ ಕದ್ದಇದ್ದು ಆರೋಪಿ ಮುಲ್ಲಾನಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.