
ಬೆಳಗಾವಿ : ಸೆರೆಯಾಗದ ಚಿರತೆ, ಮುಂದುವರಿದ ಆತಂಕ

ಬೆಳಗಾವಿ ; ಕಳೆದ ನಾಲ್ಕು ದಿನಗಳಿಂದ ಜಾಧವ ನಗರದ ಮನೆಯ ಕಾಂಪೌಂಡ್ ಒಂದರಲ್ಲಿ ಚಿರತೆಯ ಚಲನ ವಲನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಕಣ್ಮರೆಯಾಗಿದ್ದ ಚಿರತೆ ಇಲ್ಲಿಯವರೆಗೂ ಪತ್ತೆಯಾಗಿಲ್ಲ.
ಅರಣ್ಯ ಅಧಿಕಾರಿಗಳು ಗಾಲ್ಫ ಮೈದಾನ ಕಾಡಿನ ಮಾದರಿಯಲ್ಲಿರುವುದರಿಂದ ಚಿರತೆ ಇಲ್ಲಿಯೇ ಇರಬಹುದು ಎಂದು ಶಂಕಿಸಿ ಗದಗ, ದಾಂಡೇಲಿಯಿಂದ ವಿಶೇಷ ತಂಡ ಕರೆಯಿಸಿ ಚಿರತೆ ಸೆರೆ ಹಿಡಿಯಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಗಾಲ್ಫ್ ಮೈದಾನದಲ್ಲಿ ಶನಿವಾರದಿಂದಲೇ ಚಿರತೆ ಕಾರ್ಯಾಚರಣೆಯಲ್ಲಿರುವ ಅರಣ್ಯ ಅಧಿಕಾರಿಗಳು ಭಾನುವಾರ ಗಾಲ್ಫ ಮೈದಾನದ ಸುತ್ತ ಚಿರತೆ ಸೆರೆ ಹಿಡಿಯಲು ಸರ್ಪಗಾವಲು ಹಾಕಿದ್ದಾರೆ. ಅಲ್ಲದೆ ಮೈದಾನದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಿರತೆ ಶೋಧಕ್ಕಾಗಿ ಕಾರ್ಯ ಮುಂದುವರೆಸಿದ್ದಾರೆ.
ಇಲ್ಲಿಯವರೆಗೂ ಚಿರತೆಯ ಚಲನವಲನಗಳನ್ನು ಪತ್ತೆಯಾಗಿಲ್ಲ. ಚಿರತೆ ಸಿಗುವವರೆಗೂ ಗಾಲ್ಪ್ ಮೈದಾನದ ಸುತ್ತಮುತ್ತಲಿನ ನಾಗರಿಕರು ಹೊರಗೆ ಬರದಂತೆ ಸಹಕರಿಸಬೇಕೆಂದು ಆರ್ ಎಫ್ ಓ ರಾಕೇಶ ಅರ್ಜುನವಾಡ ತಿಳಿಸಿದ್ದಾರೆ.