Select Page

Advertisement

ಬಿಗ್ ಬಾಸ್-11 ರ ಕುರಿತು ಕಿಚ್ಚ ಸುದೀಪ್ ಮಹತ್ವದ ಅಪ್ಡೇಟ್ ; ಈ ಬಾರಿ ಕಿಚ್ಚ ಇರಲ್ವ…?

ಬಿಗ್ ಬಾಸ್-11 ರ ಕುರಿತು ಕಿಚ್ಚ ಸುದೀಪ್ ಮಹತ್ವದ ಅಪ್ಡೇಟ್ ; ಈ ಬಾರಿ ಕಿಚ್ಚ ಇರಲ್ವ…?

ಬಿಗ್ ಬಾಸ್ – ಕನ್ನಡ 10 ರ ಸೀಸನ್ ಯಶಸ್ವಿ ಪ್ರದರ್ಶನದ ನಂತರ ಈಗ 11 ನೇ ಸೀಜನ್ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ ನಿರೂಪಕ ನಟ ಕಿಚ್ಚ ಸುದೀಪ್ ಕಾರ್ಯಕ್ರಮದ ಕುರಿತು ಮೆಗಾ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ.

ಈ ಬಾರಿಯ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಮಾಡಲ್ವಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಸುದೀಪ್ ಅವರು ನೀಡಿದ ಹೇಳಿಕೆಯಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಸೀಸನ್ 11ರ ನಿರೂಪಕ ಬದಲಾಗುವ ಕುರಿತು ಸುದ್ದಿ ಎಲ್ಲೆಡೆ ಹಬ್ಬಿತ್ತು ಆದರೆ ಇದಕ್ಕೆ ಸಂಬಂಧಿಸಿದಂತೆ ವಾಹಿನಿಯಾಗಲಿ, ನಟ ಸುದೀಪ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ.

ಈ ಸಂದರ್ಭದಲ್ಲಿ ಸಿನಿಮಾಗೆ ನ್ಯಾಯ ಕೊಡಬೇಕಾ? ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕಾ? ಎಂದು ಪ್ರಶ್ನಿಸಿದರು. ಸುದೀಪ್ ಅವರು ಈ ಮಾತನ್ನು ಆಡಿದ ಬೆನ್ನಲ್ಲೇ ಈ ಬಾರಿಯ ಶೋನದಲ್ಲಿ ನಿರೂಪಣೆ ಮಾಡ್ತಾರೋ ಇಲ್ವೋ ಪ್ರಶ್ನೆ ಎದುರಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ನಾನು ಶೋ ನಡೆಸಿಕೊಡುತ್ತೇನೆ ಅಥವಾ ನಡೆಸಿಕೊಡುವುದಿಲ್ಲ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡಿಲ್ಲ. ವಾಹಿನಿ ಸಹ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭವಾಗುವವರೆಗೂ ಕುತೂಹಲ ಮುಂದುವರಿಯಲಿದೆ.


ಅಚ್ಚರಿ ಹೆಸರುಗಳು ಕೇಳಿಬರುತ್ತಿವೆ. ಈ ಮಧ್ಯೆ ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಪಟ್ಟಿ ತುಂಬಾ ದೊಡ್ಡದಾಗಿ ಬೆಳೆಯುತ್ತಿದೆ.

ಈ ಬಾರಿಯ ಬಿಗ್ ಬಾಸ್ ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳ ಹೆಸರೂ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ಪ್ರೀಯಾ ಸವದಿ, ಮುಕಳೆಪ್ಪ ಹಾಗೂ ಶಿವಪತ್ರ ಯಾದವಾಡ ಅವರ ಹೆಸರು ಜೋರಾಗಿ ಕೇಳಿಬರುತ್ತಿದ್ದು ಇವರ ಅಭಿಮಾನಿಗಳು ಜೈ ಅಂದಿದ್ದಾರೆ.

ಇನ್ನೂ ಇದೇ ಸೀಜನ್ ನಲ್ಲಿ ಕೆಲವು ಅಚ್ಚರಿ ಹೆಸರುಗಳಿವೆ. ಚಿಕ್ಕಮಗಳೂರಿನ ಗೌದಿಗದ್ದೆಯ ವಿನಯ್ ಗುರುಜಿ ಹಾಗೂ ಮಾಜಿ ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಜೋರಾಗಿ ಕೇಳಿಬರುತ್ತಿವೆ.

ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ಲೋಕಸಭಾ ಟಿಕೆಟ್ ಮಿಸ್ ಮಾಡಿದ್ದ ಹಿನ್ನಲೆಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಸುದ್ದಿ ಸಂಕಲನ ಮೂಡಿಸಿತ್ತು. ಜೊತಗೆ ಯುವ ರಾಜಕಾರಣಿ ಪ್ರತಾಪ್ ಸಿಂಹ ಆಗಾಗ್ಗೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಾರೆ. ಸಧ್ಯ ಇವರ ಹೆಸರು ಬಿಗ್ ಬಾಸ್ ನಲ್ಲಿ ಕೇಳಿಬರುತ್ತಿದೆ‌‌.

ಇನ್ನೂ ವಿನಯ್ ಗುರುಜಿ ಈ ಬಾರಿ ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಮಾತು ಜೋರಾಗಿವೆ. ಸಧ್ಯ ಸೋಶಿಯಲ್ ಮೀಡಿಯಾದಲ್ಲಿ‌ ಅನೇಕರ ಹೆಸರು ಜೋರಾಗಿ ಕೇಳಿಬರುತ್ತಿವೆ. ಇದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿಕೊಂಡು ಫೇಮಸ್ ಆದವರ ಹೆಸರೂ ಇವೆ.

ಸೀರಿಯಲ್‌ ನಟಿ ಜ್ಯೋತಿ ರೈ. ಹಾಗೆಯೇ ಪ್ರವಾಸಿ ಕುರಿತು ವೀಡಿಯೋ ಮಾಡುವ ಯೂಟ್ಯೂಬರ್ ಡಾ. ಬ್ರೋ. ನಟಿ ಹರ್ಷ ಕಾವೇರಿ, ನಟಿ ಪ್ರೀಯಾ ಶಠಮರ್ಷನ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ ಪುತ್ರಿ ನಿಶಾ ಯೋಗೇಶ್ವರ್, ಅಶ್ವಿನಿ ಗೌಡ ಹೆಸರು ಕೇಳಿಬರುತ್ತಿವೆ‌.

ಇನ್ನೂ ಟಿಕ್ ಟಾಕ್ ಸ್ಟಾರ್ ಪ್ರೀಯಾ ಸವದಿ, ಮುಕಳೆಪ್ಪ, ಶಿವಪುತ್ರ ಯಾದವಾಡ, ವಕೀಲ ನಾಗರಾಜ ಕುಡಪಲಿ ಸೇರಿದಂತೆ ಅನೇಕರ ಹೆಸರುಗಳು ಕೇಳಿಬರುತ್ತಿವೆ. ಇನ್ನೂ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು ಪರ, ವಿರೋಧ ಚರ್ಚೆ ನಡೆದಿವೆ.

Advertisement

Leave a reply

Your email address will not be published. Required fields are marked *

error: Content is protected !!