
ಕೋವಿಡ್ ನಲ್ಲಿ ಮಹಾ ಹಗರಣ ; 1722 ಪುಟದ ವರದಿ ಸಲ್ಲಿಕೆ

ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ನಕಲಿ ಬಿಲ್ ಸೃಷ್ಟಿಸಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ನ್ಯಾ. ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಸಮೀತಿ ಸರ್ಕಾರಕ್ಕೆ 1722 ಪುಟಗಳ ಸಮಗ್ರ ವರದಿ ಸಲ್ಲಿಸಿದೆ.
ಕೊರೋನಾ ಮಹಾಮಾರಿ ಇಡೀ ದೇಶಕ್ಕೆ ಆವರಿಸಿ ಜನ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರದ ಅವದಿಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ನಡುವೆ ಸರ್ಕಾರ ವಿಶೇಷ ತನಿಖಾ ಸಮೀತಿ ರಚಿಸಿದ್ದು ಸಧ್ಯ ಅದರ ವರದಿ ಸರ್ಕಾರದ ಕೈ ಸೇರಿದೆ.
7223 ಕೋಟಿ ರೂ. ವಸ್ತುಗಳ ಖರೀದಿಗೆ ಹಲವಾರು ನಕಲಿ ಬಿಲ್ ಸೃಷ್ಟಿ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ವೆಂಟಿಲೇಟರ್, ಆಕ್ಸಿಜನ್ ಉಪಕರಣ, ಹಾಸಿಗೆ, ದಿಂಬು, ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ವಿವಿಧ ಉಪಕರಣಳ ಖರೀದಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಇದೆ.
ಸಧ್ಯ ನ್ಯಾ. ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಸಮೀತಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು ಇನ್ನೂ ಕೆಲ ಅಂಶಗಳಲ್ಲಿ ತನಿಖೆ ಇರುವ ಕಾರಣ ಮುಂಬರುವ ದಿನಗಳಲ್ಲಿ ಸಂಪೂರ್ಣ ವರದಿ ನೀಡಲಿದೆ.
ಶನಿವಾರ ಸಿಎಂ ಗೆ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.