ಅಮಾಯಕ ಕುಟುಂಬಕ್ಕೆ ನ್ಯಾಯ ಸಿಗಲಿ ; ಮೌನ ಮುರಿದ ಕಿಚ್ಚ ಸುದೀಪ್
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವವರನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸ್ ವಶದಲ್ಲಿರುವ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಕೃತ್ಯದ ವಿರುದ್ಧ ಖ್ಯಾತ ನಟ ಕಿಚ್ಚ ಸುದೀಪ್ ಧ್ವನಿ ಎತ್ತಿದ್ದಾರೆ.
ಮೊದಲಬಾರಿಗೆ ದರ್ಶನ್ ( Darshan ) ಪ್ರಕರಣದ ಕುರಿತು ಮಾತನಾಡಿದ ನಟ ಸುದೀಪ್. ( Kichha Sudeep ) ನಾನು ಈ ಸಂದರ್ಭದಲ್ಲಿ ಅವರ ಪರ, ಇವರ ಪರ ಎಂದು ಮಾತನಾಡುವುದಿಲ್ಲ. ಮೃತ ರೇಣುಕಾ ಸ್ವಾಮಿ ಕುಟುಂಬ, ಅವರ ಪತ್ನಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮ, ಪೊಲೀಸ್ ಇಲಾಖೆ ಹಾಗೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಬಾಳಿ ಬದುಕಬೇಕಿದ್ದ ಯುವಕ ಬೀದಿಯಲ್ಲಿ ಬಿದ್ದಿದ್ದು ಆತನಿಗೆ ನ್ಯಾಯ ಸಿಗಬೇಕು. ರೇಣುಕಾಸ್ವಾಮಿ ( RenukaSwamy ) ಪತ್ನಿಯ ಮಗುವಿಗೆ ನ್ಯಾಯ ಸಿಗಬೇಕು. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ನ್ಯಾಯದ ಮೇಲೆ ಒಂದು ನಂಬಿಕೆ ಹುಟ್ಟಬೇಕು ಎಂದು ಹೇಳಿದರು.
ಮಾಧ್ಯಮಗಳಲ್ಲಿ ಘಟನೆ ಕುರಿತು ಸಂಪೂರ್ಣವಾಗಿ ತೋರಿಸುತ್ತಿದ್ದಾರೆ. ಇಲ್ಲಿ ತೋರಿಸುವ ವಿಷಯ ಅಷ್ಟೆ ನಮಗೆ ಗೊತ್ತು. ನಾವು ಸೆಲೆಬ್ರಿಟಿಗಳು ಎಂದರೆ ಏನು ದೊಡ್ಡವರಲ್ಲ. ಎಲ್ಲರಿಂದಲೂ ತಪ್ಪಾಗುತ್ತವೆ. ಒಟ್ಟಿನಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.