
VIDEO ಬೆಳಗಾವಿ-ತಿರುಪತಿ ವಿಮಾನ ರದ್ದು : ಸಿಬ್ಬಂದಿ ಜೊತೆ ಪ್ರಯಾಣಿಕರ ವಾಗ್ವಾದ

ಬೆಳಗಾವಿ : ಏಕಾಏಕಿ ಬೆಳಗಾವಿ-ತಿರುಪತಿ ವಿಮಾನ ಕ್ಯಾನ್ಸಲ್ ಆಗಿರುವ ಪರಿಣಾಮ ಪ್ರಯಾಣಿಕರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ 5.55ಕ್ಕೆ ಬೆಳಗಾವಿಯಿಂದ ತಿರುಪತಿಗೆ ಹೊರಡಬೇಕಿದ್ದ ಸ್ಟಾರ್ ಏರ್ಲೈನ್ಸ್ ಸಂಸ್ಥೆ ವಿರುದ್ಧ ಮೂವತ್ತಕ್ಕೂ ಅಧಿಕ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಸ್ಟಾರ್ ಏರ್ಲೈನ್ಸ್ ಕೌಂಟರ್ ನಲ್ಲಿ ಸಿಬ್ಬಂದಿಗಳನ್ನು ಪ್ರಯಾಣಿಕರು ತರಾಟೆಗೆ ತಗೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ಏಕಾಏಕಿ ವಿಮಾನ ಕ್ಯಾನ್ಸಲ್ ಮಾಡದ್ದೀರಿ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಫ್ಲೈಟ್ ಕ್ಯಾನ್ಸಲ್ ಅಂತಾ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸಿದ್ದಾರೆ. ವಿಜಯಪುರ, ಬಾಗಲಕೋಟ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಯಿಂದ ಪ್ರಯಾಣಿಕರು
ಆಗಮಿಸಿದರು, ತಿರುಪತಿಯಲ್ಲಿ ಈಗಾಗಲೇ ರೂಮ್ ಬುಕ್ ಮಾಡಿದ್ದೇವೆ, ವಾಪಾಸ್ ಬರಲು ಫ್ಲೈಟ್ ಬುಕ್ ಆಗಿದೆ. ಈಗ ಹೋಗುವ ವಿಮಾನ ಕ್ಯಾನ್ಸಲ್ ಮಾಡಿದ್ರಿಂದ ಸಾಕಷ್ಟು ಹಾನಿಯಾಗುತ್ತೆ,
ತಿರುಪತಿಗೆ ವಿಮಾನ ಬಿಡುವಂತೆ ಪ್ರಯಾಣಿಕರು ಪಟ್ಟು ಹಿಡಿದರು.