ಬೆಳಗಾವಿ : ಪ್ರವಚನಕಾರರು ಹಾಗೂ ಪ್ರಗತಿಪರ ಚಿಂತಕರಾದ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.

ನಿಜಗುಣಾನಂದ ಸ್ವಾಮೀಜಿಗೆ ಅನಾಮಧೇಯ ಪತ್ರ ಬಂದಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿದಂತೆ. ನಿಜಗುಣಾನಂದ ನಿನ್ನ ಸಾವು 2020 ರಲ್ಲಿ ತಪ್ಪಿರಬಹುದು , ಆದರೆ 2023 ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ ಅತೀ ಭೇಗ ನಿನ್ನ ತಿಥಿಗೆ ಭಕ್ತರಿಗೆ ಹೇಳು. Hindu

ಧರ್ಮ ದೇವತೆಯನ್ನು ನಿಂಧಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ‌ ದಿನಗಳು ಪ್ರಾರಂಭವಾಗಿವೆ. ಇನ್ನೂ ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾ ದೇವಿ ನಮ: ಎಂದು ಬರೆದಿದ್ದು, ಕೊನೆಗೆ ಸಹಿಷ್ಣು ಹಿಂದು ಎಂದು ಉಲ್ಲೇಖ ಮಾಡಿದ್ದಾರೆ. Nijagunandh Swamiji

ಈ ಹಿಂದೆಯೂ ಶ್ರೀಗಳಿಗೆ ಅನೇಕ ಪತ್ರ ಬಂದಿದ್ದವು. ಹಿಂದೂ ಧರ್ಮ ವಿರೋಧಿ ಹೇಳಿಕೆ ನೀಡುತ್ತಾರೆ ಎಂಬ ಕಸರಣಕ್ಕೆ ಶ್ರೀಗಳ ವಿರುದ್ಧ ಅನೇಕ ಬಾರಿ ಕೊಲೆ ಬೆದರಿಕೆ ಪತ್ರ ಅನಾಮಧೇಯವಾಗಿ ಬಂದಿವೆ. Lingyath

ಇದಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು.‌ ಕಳೆದ ಹದಿನೈದು ದಿನಗಳ ಹಿಂದೆ ನನಗೆ ಪತ್ರ ಬಂದಿದೆ. ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿದಂತೆ ಪತ್ರಗಳೂ ಬರುತ್ತಿವೆ. ನನಗೆ ಸಾವಿನ ಬಗ್ಗೆ ಯಾವುದೇ ಚಿಂತೆಯಿಲ್ಲ, ಆದರೆ ಸಮಾಜದಲ್ಲಿ ನಮ್ಮ ಸೇವೆ ನಿಂತು ಹೋಗುತ್ತದೆ ಎಂಬ ಚಿಂತೆ ಇದೆ ಎಂದು ಹೇಳಿಕೆ ನೀಡಿದ್ದಾರೆ.