ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿರುವ ಬಾಂಗ್ಲಾ ಗಲಭೆಕೋರರು ; ಕರಾಳ ಮುಖ ಬಿಚ್ಚಿಟ್ಟ ವಿದ್ಯಾರ್ಥಿ
ಬೆಳಗಾವಿ : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಬೆಳಗಾವಿಯ 25 ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ.
ಬಾಂಗ್ಲಾದಲ್ಲಿ ಹಿಂಸಾಚಾರ ಕೈ ಮೀರುವ ಹಂತಕ್ಕೆ ತಲುಪುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಬೆಳಗಾವಿ ಸಂಸದ
ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಗಮನಕ್ಕೆ ತಂದಿದ್ದರು. ತಕ್ಷಣ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ತೀಳಿಸುವ ಮೂಲಕ ಬೆಳಗಾವಿಯ 25 ವೈದ್ಯಕೀಯ ವಿದ್ಯಾರ್ಥಿಗಳನ್ನು ಕಳೆದ ಜುಲೈ 27 ರಂದು ಭಾರತಕ್ಕೆ ಕರೆತರಲಾಗಿದೆ.
ಬಾಂಗ್ಲಾದೇಶದ ಕರಾಳ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ
ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ನೇಹಲ್ ಸವಣೂರು. ನಾವು ಬಾಂಗ್ಲಾದಲ್ಲೇ ಉಳಿದುಕೊಂಡಿದ್ದರೆ, ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿದ್ದರು. ಅಲ್ಲಿ ನಾವು ಸಾಕಷ್ಟು ನೋವು ಅನುಭವಿಸಿದೇವು. ಎಲ್ಲ ಕಡೆಯೂ ಕರ್ಪ್ಯೂ ಇತ್ತು, ಊಟಕ್ಕೂ ಪರದಾಡಬೇಕಾಯಿತು. ಎರಡೇ ನಿಮಿಷದಲ್ಲಿ ತಿನ್ನುವುದಕ್ಕೆ ಆಹಾರ ತಂದು ಕೋಣೆ ಸೇರುತ್ತಿದ್ದೇವು ಎಂದು ವಿವರಿಸಿದರು.
ಹಿಂದೂಗಳೇ ಇವರ ಟಾರ್ಗೆಟ್ : ಯುವತಿಯರ ಹಾಸ್ಟೆಲ್ ಬಳಿ ಬಹಳಷ್ಟು ಸಮಸ್ಯೆಗಳು ಇದ್ದವು. ವಿದ್ಯಾರ್ಥಿನಿಯರು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದಿನಗಳೆದಂತೆ ಗಲಭೆಕೋರರು ಹಿಂದೂಗಳನ್ನೇ ಗುರಿಯಾಗಿಸಿ ದಾಳಿ ಮಾಡಲು ಪ್ರಾರಂಭಿಸಿದರು. ಇಂಟರ್ನೆಟ್ ಸೌಲಭ್ಯ ಕಡಿತ ಮಾಡಲಾಗಿತ್ತು. ಪರಿಸ್ಥಿತಿ ಕುರಿತು ಪೋಷಕರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಭಾರತ ಸರ್ಕಾರದ ಸಹಕಾರದಿಂದ
ಮರಳಿ ಮನೆಗೆ ಬಂದಿದ್ದೇವೆ ಎಂದು ವಿದ್ಯಾರ್ಥಿ ನೇಹಲ್ ಸವಣೂರು ಹೇಳಿದರು.