ರಾಯಬಾಗ : ಬೈಕ್ ಹಾಗೂ ಅಟೋ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 6 ತಿಂಗಳ ಮಗು ಸೇರಿ ಮೂವರು ಮೃತಪಟ್ಟ ಘಟನೆ ರಾಯಬಾಗದ ರೈಲ್ವೆ ‌ನಿಲ್ದಾಣದ ಬಳಿ‌ ಸಂಭವಿಸಿದೆ.

ಮಹಾಂತೇಶ್ ‌ಮಾನೆ, ಸಾಕ್ಷಿ ಮಾನೆ ಸೇರಿದಂತೆ 6 ತಿಂಗಳ ಮಗು ಮೃತಪಟ್ಟ ದುರ್ದೈವಿಗಳು. ಸೋಮವಾರ ಸಂಜೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲಿ ‌ಮೃತಪಟ್ಟಿದ್ದಾರೆ.

ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.