ಟ್ಯೂಬ್ ಹೋಯ್ತು ಬೋಟ್ ಬಂತು ; ಒಂದೇ ದಿನದಲ್ಲಿ ದೂರವಾಯ್ತು ಸಂಕಷ್ಟ
ಚನ್ನಮ್ಮನ ಕಿತ್ತೂರು : ತಾಲ್ಲೂಕಿನ ನಿಂಗಾಪುರ ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದ ಮಳೆಗಾಲದಲ್ಲಿ ಟ್ಯೂಬ್ ತೆಪ್ಪದಲ್ಲಿ ಮಕ್ಕಳು ಶಾಲೆಗೆ, ಮಹಿಳೆಯರು ಮತ್ತು ರೈತರು ಜಮೀನುಗಳಿಗೆ, ಪರಸ್ಥಳಗಳಿಗೆ ಹೋಗಬೇಕೆಂದರೆ ಅಂಗೈಲಿ ಜೀವ ಹಿಡಿದುಕೊಂಡು ಪ್ರಯಾಣಿಸುತ್ತಿದ್ದರು.
ಈ ಹಿನ್ನಲೆ ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಮಾಹಿತಿ ಇರಲಿಲ್ಲ. ಇಲ್ಲಿಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಇಲ್ಲಿಯ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಯಾವುದೇ ಸಮಸ್ಯೆ ಆಗದಂತೆ ಶಾಶ್ವತ ಪರಿಹಾರ ಮಾಡಿಕೊಂಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಡಳಿತದಿಂದ ಬೋಟ್ ಆಗಮನ : ಶಾಲೆಗಳಿಗೆ ವಿದ್ಯಾರ್ಥಿಗಳು ಟ್ಯೂಬ್ ತೆಪ್ಪದ ಮೇಲೆ ಕುಳಿತು ಹೋಗುವುದು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳ
ಸಮಸ್ಯೆಗೆ ಸ್ಪಂದಿಸಿ 8 ಜನ ಕುಳಿತು ಸಾಗುವ ನೂತನ ಫೈಬರ್
ಮೊಟರ್ ಬೋಟ್ ನ್ನು ಎಸ್ ಡಿ ಆರ್ ಎಫ್ ತಂಡದೊಂದಿಗೆ ಗ್ರಾಮಕ್ಕೆ ಕಳಿಸಿದ್ದಾರೆ. ಗ್ರಾಮಕ್ಕೆ ಬೋಟ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ವಾಹನಕ್ಕೆ ಪೂಜೆ ಮಾಡಿ ಸ್ವಾಗತಿಸಿಕೊಂಡರು.
ವಾಹನದಲ್ಲಿ ಹತ್ತಿ ಮಹಿಳೆಯರು, ಮಕ್ಕಳು ಬೋಟ್ ನೋಡಿದ ತಕ್ಷಣ ಮುಖದಲ್ಲಿ ಮಂದಹಾಸ ಮೂಡಿತ್ತು. ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಜಿಲ್ಲಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ.
ತಹಶೀಲ್ದಾರ ರವಿಂದ್ರ ಹಾದಿಮನಿ, ಲೋಕೋಪಯೋಗಿ ಇಲಾಖೆ ಎಇಇ ಸಂಜೀವ ಮಿರಜಕರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ ಇದ್ದರು.
ಕೆರೆಯ ಹಿನ್ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಈಗಾಗಿ ತಾತ್ಕಾಲಿಕ ಬೋಟ್ ವ್ಯವಸ್ಯೆ ಕಲ್ಪಿಸಲಾಗಿದೆ. ಮುಂದೆ ಶಾಶ್ವತ ಪರಿಹಾರ ಮಾಡುತ್ತೇನೆ.
ಬಾಬಾಸಾಹೇಬ ಪಾಟೀಲ
ಶಾಸಕ