ಬೆಳಗಾವಿ : ಸಚಿವ ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಖಂಡಿಸಿ ಪ್ರತಿಭಟನೆ ನಡೆಸಲಾಗಿದ್ದು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.
ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು ಅಹಿಂದ ನಾಯಕ ಎಂದು ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರನ್ನ ಹತ್ತಿಕ್ಕುವ ಕೆಲಸ ಆಗುತ್ತಿದೆ ಎಂದುಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಸತೀಶ ಜಾರಕೊಹೊಳಿ ಅವರು ಯಾರಿಗೂ ಹೆದರುವವರಲ್ಲಾ
ಯಾವುದೇ ದಾಳಿ ಮಾಡಿದರೂ ನಮ್ಮ ನಾಯಕರು ಹೆದರುವುದಿಲ್ಲಾ ಇಡಿ ಸಂಸ್ಥೆಯನ್ನ ದುರ್ಬಳಕೆ ಮಾಡಿಕ್ಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರು ಇಡಿ ದಾಳಿ ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಇನ್ನು ಈ ನಡುವೆ ಬೆಳಗಾವಿಯ ಟಿವಿ ಸೆಂಟರ್ ನಲ್ಲಿರುವ ಸತೀಶ್ ಅಳಿಯ ವೈ ಮಂಜುನಾಥ ನಿವಾಸಕ್ಕೆ ಗೋವಾದಿಂದ ಮತ್ತೋರ್ವ ಇಡಿ ಅಧಿಕಾರಿ ಬಂದಿದ್ದು ಲ್ಯಾಪ್ ಟಾಪ್ ಸಮೇತ ಇಡಿ ಅಧಿಕಾರಿ ಮಂಜುನಾಥ ಮನೆಗೆ ಆಗಮಿಸಿದ್ದಾರೆ. ಸದ್ಯ ಮನೆಯಲ್ಲಿಯೇ ಇರುವ ಮಂಜುನಾಥ ಅವರನ್ನು ಇಡಿ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.


