ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ : ಸಿಎಂ ಘೋಷಣೆ
ಬೆಂಗಳೂರು : ಕನ್ನಡದ ಖ್ಯಾತ ನಡ ದಿ. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಇಂದು ಬೆಂಗಳೂರಿನಲ್ಲಿ ನಡೆದ ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ. ಪುನೀತ್ ಬದುಕಿನ ಪ್ರತಿಯೊಂದು ಘಳಿಗೆ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತದ್ದು. ಇಂತಹ ಅಪರೂಪದ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
Video : ಅಪ್ಪು ಆಸ್ಪತ್ರೆಗೆ ಹೋಗುತ್ತಿರುವ ಕೊನೆಯ ಗಳಿಗೆ ಸಿಸಿಟಿವಿಯಲ್ಲಿ ಸೆರೆ https://belagavivoice.com/appu_last_video/#.YYI90aVtecA.whatsapp
ಇಷ್ಟೇ ಅಲ್ಲದೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಅಪ್ಪು ಹೆಸರು ಶಿಪಾರಸ್ಸು ಮಾಡಲಾಗುತ್ತದೆ. ಜೊತೆಗೆ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ನಟ ಶಿವರಾಜಕುಮಾರ್, ನಟ ದರ್ಶನ್, ರಮೇಶ್ ಅರವಿಂದ್, ಯಶ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟ, ನಟಿಯರು ಪಾಲ್ಗೊಂದಿದ್ದರು.