
ನಟ ಸುದೀಪ್ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಬರೆದ ಪತ್ರದಲ್ಲಿ ಏನಿದೆ…?

ಬೆಂಗಳೂರು : ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಸಂಜೀವ್ ಇತ್ತೀಚೆಗೆ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸುದೀಪ್ ಅವರಿಗೆ ಪತ್ರವೊಂದನ್ನು ಬರೆದು ಧೈರ್ಯ ತುಂಬಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಬರೆದ ಪತ್ರದಲ್ಲಿ “ ನಿಮ್ಮ ತಾಯಿಯ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ತಾಯಿಯನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟ ಎಂದು ನನಗೆ ಗೊತ್ತು”
ಈ ಪ್ರಪಂಚದಲ್ಲಿ ತಾಯಿಯ ಮಮತೆಯ ಮುಂದೆ ಯಾವುದೂ ದೊಡ್ಡದಲ್ಲ. ನೀವು ನಿಮ್ಮ ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದೀರಿ ಎಂಬುದು ನಮಗೂ ತಿಳಿಯಿತು. ಈ ಘಟನೆಯಿಂದ ನಿಮ್ಮ ಮನೆಯವರಿಗೂ ತುಂಬಾ ದುಃಖವಾಗಿದೆ. ಅವರ ನೆನಪು ಸದಾಕಾಲವೂ ನಿಮ್ಮ ಜೊತೆಗಿರಲಿ.
ನಿಮ್ಮ ತಾಯಿಯವರ ನಿಧನಕ್ಕೆ ನನ್ನ ಸಂತಾಪದ ನುಡಿಗಳು. ಆ ದುಃಖದಿಂದ ಹೊರಬರುವ ಶಕ್ತಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಭಗವಂತ ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿ ಪ್ರಧಾನಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಪತ್ರವನ್ನು ನಟ ಸುದೀಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು. ನರೇಂದ್ರ ಮೋದಿ ಜಿ. ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ ಎಂದು ಹೇಳಿದ್ದಾರೆ.
https://x.com/KicchaSudeep/status/1850852556706378001?t=HkyUGXJxO6ANMVhupNsaig&s=19
Tweet