
ಬೆಳಗಾವಿ ವಾಯ್ಸ್ ವರದಿ ಫಲಶೃತಿ ; ಬಾಕ್ಸೈಟ್ ರಸ್ತೆಯಲ್ಲಿ ತಾತ್ಕಾಲಿಕ ವ್ಯವಸ್ಥೆ

ಬೆಳಗಾವಿ : “ ಬಾಕ್ಸೈಟ್ ರಸ್ತೆಯಲ್ಲಿ ಮೃತ್ಯುಕೂಪ ; ಜನರ ಪ್ರಾಣ ಹೋಗುವ ಮುನ್ನ ಎಚ್ಚರಾಗಿ” ತಲೆಬರಹದ ಅಡಿಯಲ್ಲಿ ಸುದ್ದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ಹನುಮಾನ್ ಸರ್ಕಲ್ ಗೆ ತೆರಳುವ ಬಾಕ್ಸೈಟ್ ರಸ್ತೆ ಕಾಮಗಾರಿ ಚಾಲ್ತಿಯಿದ್ದರು ಯಾವುದೇ ಎಚ್ಚರಿಕೆ ಫಲಕ ಹಾಕದೇ ಗುತ್ತಿಗೆದಾರರು ಬೇಜವಾಬ್ದಾರಿ ತೋರಿದ್ದರು. ಇದರಿಂದ ವೇಗವಾಗಿ ಬಂದ ಜನರಿಗೆ ಎಲ್ಲಿ ರಸ್ತೆ ಅರ್ಧಕ್ಕೆ ನಿಂತಿದೆ ಎಂಬುವುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಾಕ್ಸೈಟ್ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಜನರಿಗೆ ತೊಂದರೆ ಆಗುತ್ತಿದ್ದ ಚಿತ್ರ
ಸಧ್ಯ ರಸ್ತೆ ಅರ್ಧಕ್ಕೆ ನಿಂತ ಜಾಗದಲ್ಲಿ ಕಡಿ ಹಾಕುವ ಮೂಲಕ ಅಪಾಯ ತಡೆಯುವ ಕೆಲಸ ಮಾಡಲಾಗಿದೆ. ಇದರಿಂದ ಜನರಿಗೆ ತಾತ್ಕಾಲಿಕ ಅನುಕೂಲ ಆದಂತಾಗಿದ್ದು ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಇನ್ನಷ್ಟು ಅನುಕೂಲ ಆಗಲಿದೆ.
ನಗರದ ಅನೇಕ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಜನ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಪರಿಹಾರ ನೀಡಬೇಕೆಂದು ನಗರವಾಸಿಗಳು ಆಗ್ರಹಿಸುತ್ತಿದ್ದಾರೆ.