Select Page

Advertisement

ಬೆಳಗಾವಿ ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್ ಹೆಸರು..! ಭುಗಿಲೆದ್ದ ಆಕ್ರೋಶ

ಬೆಳಗಾವಿ ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್ ಹೆಸರು..! ಭುಗಿಲೆದ್ದ ಆಕ್ರೋಶ

ಬೆಳಗಾವಿ : ರಾಜ್ಯಾದ್ಯಂತ ಸದ್ದು ಮಾಡಿರುವ ವಕ್ಫ್ ಬೋರ್ಡ್ ಪ್ರಕರಣ ಸದ್ಯ ಬೆಳಗಾವಿಗೂ ವ್ಯಾಪಿಸಿದೆ. ಚಿಕ್ಕೋಡಿ ತಾಲೂಕಿನ ರೈತರ ಜಮೀನಿನ ಮೇಲೆ ವಕ್ಫ್ ನ ವಕ್ರ ದೃಷ್ಟಿ ಬಿದ್ದಿದ್ದು ಸಧ್ಯ ರೈತರಲ್ಲಿ ಆತಂಕ ಮೂಡಿಸಿದೆ.

ಚಿಕ್ಕೋಡಿ ತಾಲೂಕಿನ ಸದಲಗಾ ಹೋಬಳಿ ಎಕ್ಸಂಬಾ ಗ್ರಾಮದ ಅಪ್ಪಸಿಂಗ್ ರಜಪೂತ ಎಂಬುವವರ ಜಮೀನಿನ ಪಹಣಿ ಪತ್ರ ( ಉತಾರ್ ) ನಲ್ಲಿ ವಕ್ಫ್ ಬೋರ್ಡ್ ಹೆಸರು ಕಾಣಿಸಿಕೊಂಡಿದೆ.

ಪಹಣಿ ಪತ್ರದಲ್ಲಿ ಭೀಮಶಿಂಗ್, ಸಂತೋಷ್ ಹಾಗೂ ಉಮೇಶ್ ಎಂಬುವವರ ಹೆಸರು ಒಂಟಿಯಾಗಿ ಜಮೀನಿನ ಪಹಣಿ ಪತ್ರದಲ್ಲಿ ಇದ್ದು ಅದರ ಮುಂದೆ ವಕ್ಫ್ ಬೋರ್ಡ್ ಹೆಸರು ಕಾಣಿಸಿಕೊಂಡಿದೆ.

ಸಧ್ಯ ಈ ಪಹಣಿಪತ್ರ ಸೋಶಿಯಲ್ ಮೀಡಿಯಾದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ವೈರಲ್ ಆಗುತ್ತಿದ್ದು, ನಿಮ್ಮ, ನಿಮ್ಮ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಹೆಸರು ಬಂದಿದ್ದರೆ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ ಎಂವ ಸಂದೇಶ ಹರಿದಾಡುತ್ತಿವೆ.

Advertisement

Leave a reply

Your email address will not be published. Required fields are marked *

error: Content is protected !!