
ಬೆಳಗಾವಿ ನೂತನ ಡಿಡಿಪಿಐ ಎ.ಬಿ.ಪುಂಡಲಿಕ ನೇಮಕ

ಬೆಳಗಾವಿ : ರಾಜ್ಯದಲ್ಲಿ ಹಲವು ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅದರಂತೆ ಬೆಳಗಾವಿಯ ಡಿಡಿಪಿಐ ಬಸವರಾಜ ನಾಲತವಾಡ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ಎ.ಬಿ.ಪುಂಡಲಿಕ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಆಗಿ ಸೇವೆ ಸಲ್ಲಿಸಿ ಬೆಳಗಾವಿಗೆ ವರ್ಗಾವಣೆಯಾಗಿದ್ದ ಎ.ಬಿ.ಪುಂಡಲಿಕ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶದಲ್ಲಿ ಪೋಷಕರಿಂದ ಸಾಕಷ್ಟು ಹಣ ಸಲುಗೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಿದ್ದರು.
ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಹಿಂದಿನ ಸರಕಾರ ರಾಜಕೀಯ ಒತ್ತಡಕ್ಕೆ ಮಣಿದು ಅವರನ್ನು ಬೆಳಗಾವಿಯಿಂದ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಬಸವರಾಜ ನಾಲತವಾಡ ಅವರನ್ನು ನೇಮಕ ಮಾಡಿತ್ತು.
ಬಸವರಾಜ ನಾಲತವಾಡ ಅವರು ಸಹ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತಂದಿದ್ದರು. ಈಗ ಅವರನ್ನು ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ಮತ್ತೇ ಡಿಡಿಪಿಐ ಆಗಿ ಎ.ಬಿ.ಪುಂಡಲಿಕ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಅದರಂತೆ ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಅವರನ್ನು ಖಾನಾಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ವಿದ್ಯಾ ಕುಂದರಗಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.