ನಿಮಗೆ ತಾಕತ್ತಿದ್ದರೆ ವಿಜಯೇಂದ್ರರನ್ನು ಕೆಳಗಿಳಿಸಿ : ಯತ್ನಾಳ್, ಜಾರಕಿಹೊಳಿಗೆ ಸವಾಲ್
ದಾವಣಗೆರೆ : ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಮುಖಂಡ ರೇಣುಕಾಚಾರ್ಯ ಸವಾಲ್ ಎಸೆದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಇವರು. ನಿಮಗೆ ತಾಕತ್ ಇದ್ದರೆ ವಿಜಯೇಂದ್ರ ಅವರನ್ನು ಕೆಳಗಿಳಿಸಿ ನೋಡಿ. ಹಿಂದೆ ಯಡಿಯೂರಪ್ಪ ಪಕ್ಷ ಕಟ್ಟಿ ಸಂಘಟನೆ ಮಾಡದೇ ಇದ್ದಿದ್ದರೆ ಇಂದು ನೀವು ಶಾಸಕರಾಗಿ ಇರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ನಾಯಕರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಇವರು ರಾಜ್ಯಾಧ್ಯಕ್ಷ ಆದಮೇಲೆ ಬಿಜೆಪಿಗೆ ಹೊಸ ರೂಪ ಬಂದಿದೆ. ವಿಜಯೇಂದ್ರ ವಾಲ್ಮೀಕಿ ನಿಗಮದ ಹಗರಣದ ವಿರುದ್ಧ, ಮುಡಾ ಹಾಗೂ ವಕ್ಫ್ ವಿರುದ್ಧ ಹೋರಾಟ ಮಾಡಿದ್ದಾರೆ ಎಂದರು.