Select Page

ಕಾಗವಾಡ : ವೈಭವ ಸ್ಟೋನ್ ಕ್ರಷರ್ ಉದ್ಘಾಟನೆ

ಕಾಗವಾಡ : ವೈಭವ ಸ್ಟೋನ್ ಕ್ರಷರ್ ಉದ್ಘಾಟನೆ

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಲ್ಲಾಳ ಬಳಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮತ್ತು ರಾವಸಾಬ ಐಹೊಳೆ ಮಾಲೀಕತ್ವದ ನೂತನ ವೈಭವ ಸ್ಟೋನ್ ಕ್ರಶರ್‌ ಉದ್ಘಾಟನೆ ಮಾಡಲಾಯಿತು.

ಶನಿವಾರ ಅಥಣಿ ಮೊಟಗಿ ಮಠದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಜಿ, ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಶಾಸಕ ರಾಜು ಕಾಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಬಳಿಕ ಶಾಸಕ ರಾಜು ಕಾಗೆ ಮಾತನಾಡಿ,

ಪಾಲಕರು, ತಮ್ಮ ಮಕ್ಕಳು, ಶಿಕ್ಷಣದಲ್ಲಿ ಶೇ. 99 ರಷ್ಟು ಅಂಕ ಪಡೆದು, ಪಾಸಾಗಲಿ ಎಂದು ಬಯಸುತ್ತಾರೆ. ಆದರೇ ಅದೇ ಮಕ್ಕಳು ತಂದೆ-ತಾಯಿಗಳನ್ನು ಬಿಟ್ಟು ದೂರ-ದೂರ ಹೋಗಿ ನೌಕರಿ ಮಾಡುತ್ತಾರೆ. ಆದರೇ ಕಡಿಮೆ ಅಂಕ ಗಳಿಸಿದ ಮಕ್ಕಳೆ ಇಂದು ತಂದೆ-ತಾಯಂದಿರನ್ನು ನೋಡಿಕೊಳ್ಳುತ್ತಾರೆ.

ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಿ. ಈಗ ಗಜಾನನ ಮಂಗಸೂಳಿ ಮತ್ತು ರಾವಸಾಬ ಐಹೊಳೆ ಅವರು ತಮ್ಮ ಮಕ್ಕಳಿಗೆ ನೂತನ ಸ್ಟೋನ್ ಕ್ರಶರ್ ಪ್ರಾರಂಭ ಮಾಡಿ ಕೊಟ್ಟು, ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದಾರೆ. ಅವರ ಈ ಉದ್ಯೋಗ ಪ್ರಗತಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಮೊಟಗಿಮಠದ ಶ್ರೀಗಳು ಮತ್ತು ಗಚ್ಚಿನಮಠದ ಶ್ರೀಗಳು ಆಶೀರ್ವಚನ ನೀಡಿದರು. ಈ ಸಮಯದಲ್ಲಿ ಕೆಪಿಸಿಸಿ ಸದಸ್ಯ ದಿಗ್ವಿಜಯ ಪವಾರ ದೇಸಾಯಿ, ಗಜಾನನ ಮಂಗಸೂಳೆ, ರಾವಸಾಬ ಐಹೊಳೆ, ಅಥಣ ಪುರಸಭೆ ಸದಸ್ಯರಾದ ಸಂತೋಶ ಸಾವಡಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!