ಬೆಂಗಳೂರು : ಮಹಿಳೆಯರ ಜೊತೆ ಕಚೇರಿಯಲ್ಲಿ ಅಸಭ್ಯ ವರ್ತನೆ ಮಾಡಿರುವ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣ ಸಧ್ಯ ಬೆಳಗಾವಿಗೆ ತಳಕು ಹಾಕಿಕೊಂಡಿದೆ.

ಡಿಜಿಪಿ ರಾಮಚಂದ್ರ ರಾವ್ ಅವರದು ಎನ್ನಲಾದ ವೀಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಇವರು ಈ ಹಿಂದೆ ಬೆಳಗಾವಿ ವಿಭಾಗದ ಉತ್ತರ ವಲಯ ಐಜಿಪಿ ಇದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದಿದ್ದಾರೆ.

ಹಾಗಾದರೆ ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆಳಗಾವಿ ನಂಟು ಇದೆಯಾ ಎಂಬ ಅನುಮಾನ ಮೂಡಿದೆ. ಹಾಗೆಯೆ ಸಲುಗೆಯಿಂದ ಮಾತನಾಡಿದ ಆಡಿಯೋ ಒಂದು ವೈರಲ್ ಆಗಿದೆ.