ಬೆಳಗಾವಿ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ “ಬಸವ ಅಧ್ಯಯನ ಪೀಠ” ಸ್ಥಾಪಿಸಿರುವ ಕುರಿತು ಜಾಗತಿಕ ಲಿಂಗಾಯಿತ ಮಹಾಸಭೆ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ತೆರಳಿ ರಿಜಿಸ್ಟ್ರಾರ್ ಶ್ರೀ.ಸಂತೋಷ್ ಕಾಮಗೌಡ ಮತ್ತು ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ್ ಕಂಬಾರ್ ಅವರನ್ನು ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಕುರಿತಾದ ಅಧ್ಯಯನ ಪೀಠವೊಂದನ್ನು ಸ್ಥಾಪಿಸುವಂತೆ ಸಮಾಜದ ಪರವಾಗಿ ಜಾಗತೀಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿಯವರ ನೇತೃತ್ವದ ನಿಯೋಗವು ಎರಡು ವರ್ಷಗಾಲ ಹಿಂದೆ ಮನವಿ ಸಲ್ಲಿಸಿತ್ತು.
ಈಗ ಕಾರ್ಯರೂಪಕ್ಕೆ ಬಂದ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಂಡಿರುವ ವಿಶ್ವವಿದ್ಯಾಲಯದ ಕುಲಪತಿ ಶ್ರೀ. ತ್ಯಾಗರಾಜರವರು, ಶ್ರೀ ಸಂತೋಷ್ ಕಾಮಗೌಡ ಅವರು, ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ್ ಕಂಬಾರ್ ಹಾಗೂ ಮತ್ತಿತರರನ್ನು ಸಮಸ್ತ ಸಮಾಜದ ಪರವಾಗಿ ಅಭಿನಂದಿಸಲಾಯಿತು.
ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ಖಜಾಂಚಿ ಮುರಗೆಪ್ಪ ಬಾಳಿ, ಸಿ.ಎಂ. ಬೂದಿಹಾಳ, ಪ್ರವೀಣ್ ಚಿಕ್ಕಲಿ, ಶಂಕರ್ ಗುಡುಸ್, ಅಶೋಕ್ ಬೆಂಡಿಗೇರಿ, ಶಿವಾನಂದ್ ಮೇಟ್ಯಾಳ್, ಆನಂದ್ ಗುಡುಸ, ಮಹಾನಂದಾ ಪರುಶೆಟ್ಟಿ, ಶೋಭಾ ಶಿವಳ್ಳಿ, ಕಾವೇರಿ ಕಿಲಾರಿ, ರತ್ನಾ ಬೆಣಚಿನಮರಡಿ, ಶ್ರೀ ಗುರು ಗೌಡಾ ಮುಂತಾದವರು ಉಪಸ್ಥಿತರಿದ್ದರು


