ಪಠಾಣ್ ಚಿತ್ರದ ಈವರೆಗಿನ ಗಳಿಕೆ ಎಷ್ಟು ಗೊತ್ತಾ..?
ಬೆಂಗಳೂರು : ಬಹು ನಿರೀಕ್ಷಿತ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಮೊದಲ ದಿನದಿಂದ ಭರ್ಜರಿ ಹಣ ಚಾಚಿಕೊಂಡಿದೆ. ಬೈಕಾಟ್ ಅಭಿಯಾನದ ನಂತರವು ಬಾಲಿವುಡ್ ಬಾದ್ ಶಾ ಗೆಲುವಿನ ನಗೆ ಬೀರಿದ್ದಾನೆ.
ಸದ್ಯದ ಬಾಕ್ಸ್ ಆಫೀಸ್ ಕಲೆಕ್ಷನ್ ಪ್ರಕಾರ ಪಠಾಣ್ ಚಿತ್ರ ಮೊದಲ ದಿನದ ಗಳಿಕೆ ಸುಮಾರು 50 ಕೋಟಿ ಎಂದು ಅಂದಾಜಿಸಲಾಗಿದೆ. ಜಗತ್ತಿನಾದ್ಯಂತ ತೆರೆಕಂಡ ಈ ಚಿತ್ರ ಮೊದಲ ದಿನದಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇನ್ನೂ ಎರಡನೇ ದಿನದಲ್ಲಿ ಚಿತ್ರ 70 ಕೋಟಿ ಗಳಿಕೆ ಕಂಡಿದ್ದು, ಕೋಟಿ ಲೆಕ್ಕದಲ್ಲಿ ಮುನ್ನುಗ್ಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಪಠಾಣ್ ಚಿತ್ರಕ್ಕೆ ರಾಜ್ಯದ ಹಲವೆಡೆ ವಿರೋಧ ವ್ಯಕ್ತವಾಗಿದ್ದು, ಬೆಳಗಾವಿ ಹಾಗೂ ಬೆಂಗಳೂರು ಸೇರಿದಂತೆ ಕೆಲವೆಡೆ ಪ್ರತಿಭಟನೆ ನಡೆದಿದೆ.