Select Page

Advertisement

ನಾಳೆ ಬೆಳಗಾವಿಗೆ ಬಿಜೆಪಿ ಚಾಣಕ್ಯ ಅಮೀತ್ ಶಾ ಆಗಮನ : ಜಿಲ್ಲಾ ನಾಯಕರ ಸಭೆ

ನಾಳೆ ಬೆಳಗಾವಿಗೆ ಬಿಜೆಪಿ ಚಾಣಕ್ಯ ಅಮೀತ್ ಶಾ ಆಗಮನ : ಜಿಲ್ಲಾ ನಾಯಕರ ಸಭೆ

ಬೆಳಗಾವಿ :  ಜ.28 ರಂದು ಬೆಳಗಾವಿಯ ಎಂಕೆ ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಸಮಾವೇಶಕ್ಕೆ ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‌ಮಹೇಶ ತೆಂಗಿನಕಾಯಿ ಹೇಳಿದರು.

ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರದ ನಾಯಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಮುಗಿದ ಬಳಿಕ ಬೆಳಗಾವಿ ನಗರದ ಹೋಟೆಲ್ ಒಂದರಲ್ಲಿ ಎರಡೂ ಪ್ರತ್ಯೇಕ ಸಭೆಯನ್ನು ಅಮಿತ್ ಶಾ ಅವರು ನಡೆಸಿಕೊಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ನಾಯಕರು ಆಗಮಿಸಲಿದ್ದಾರೆ ಎಂದರು.

ಬರುವ ಚುನಾವಣೆಯಲ್ಲಿ ಬಿಜೆಪಿ ಮಿಷನ್ 150 ಯೋಜನೆಯಲ್ಲಿ ಬೂತ್ ಮಟ್ಟದ ಅಭಿಯಾನ ಸಾಕಷ್ಟು ಯಶಸ್ವಿಯಾಗಿದೆ. ಎರಡನೇ ಅಭಿಯಾನವಾದ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿ ಒಂದು ಕೋಟಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದೇವೆ. ಕೇಂದ್ರ ‌ಮತ್ತು‌ ರಾಜ್ಯ ಸರಕಾರದ ಯೋಜನೆಯ ಕರಪತ್ರವನ್ನು ಜನರಿಗೆ‌ ಹಂಚುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇತ್ತೀಚೆಗೆ ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ‌ಅವರ‌ ಬೃಹತ್ ರೋಡ್ ಶೋಗೆ ಭಾರೀ ಜನ ಬೆಂಬಲ‌ ಸಿಕ್ಕಿತ್ತು. ಅದರಂತೆ ನಾಳೆ‌ ಅಮಿತ್ ಶಾ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಕಿತ್ತೂರು, ಖಾನಾಪುರ, ಬೈಲಹೊಂಗಲ ಕ್ಷೇತ್ರದ ಲಕ್ಷಾಂತರ ಜನ ಇದರಲ್ಲಿ ಭಾಗಿಯಾಗಲಿದ್ದಾರಡ. ಬೆಳಗಾವಿ ಜಿಲ್ಲೆಗೆ ಬೂಸ್ಟರ್ ಡೋಸ್ ಕೊಡುವ ನಿಟ್ಟಿನಲ್ಲಿ ಸಂಜೆ ಸಭೆ ನಡೆಯಲಾಗುತ್ತಿದೆ‌. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂ ಯಡಿಯೂರಪ್ಪ ಭಾಗವಹಿಸುವರು ಎಂದರು.

ಬೆಳಗಾವಿ ಜಿಲ್ಲಾ ಬಿಜೆಪಿ ಭಿನ್ನಮತಕ್ಕೆ ಅಮಿತ್ ಶಾ ಶಮನ  ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ಯಾವುದೇ ಭಿನ್ನಮತ, ಗುಂಪುಗಾರಿಕೆ ಇಲ್ಲಾ. ಸಣ್ಣಪುಟ್ಟ ವ್ಯತ್ಯಾಸ ಭಿನ್ನಾಭಿಪ್ರಾಯ ಇದ್ರೇ ವರಿಷ್ಠರು ಸರಿ ಮಾಡುತ್ತಾರೆ ಎಂದರು. ರಾಜ್ಯ‌ಸಭಾ‌‌ ಸದಸ್ಯ ಈರಣ್ಣಾ ಕಡಾಡಿ,‌ ವಿನಯ‌ ಬಿದರಿ, ಶಾಸಕ ಅನಿಲ್ ಬೆನಕೆ, ನಿರ್ಮಲಕುಮಾರ ಸೂರಾನಾ, ಸಂಜಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!