
ಸಿದ್ದೇಶ್ವರ ಶ್ರೀ ಅಂತಿಮ ವಿದಾಯ ಪತ್ರದಲ್ಲಿ ಏನಿದೆ…?

ಬೆಳಗಾವಿ : ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಈ ಕುರಿತು ಸೋಮವಾರ ರಾತ್ರಿ ಹತ್ತು ಗಂಟೆಗೆ ಅಂತಿಮ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಸಿದ್ದೇಶ್ವರ ಶ್ರೀ 2014 ರಲ್ಲಿ ತಮ್ಮ ಅಂತಿಮ ವಿಧಿ ವಿಧಾನಗಳ ಕುರಿತು ಬರೆದಿದ್ದಾರೆ.
ಪತ್ರದ ಹೆಸರು : ಅಂತಿಮ ಅಭಿವಂದನ ಪತ್ರ
ಬದುಕು ಅನುಭವಗಳ ಪ್ರವಾಹ. ನಾನು ಈವರೆಗೂ ಅತ್ಯಂತ ಸಮಾಧಾನದ ವೇಗವಿಲ್ಲದ ಜೀವನ ನಡೆಸಿರುವೆ. ಬದುಕಿನ ಸಿರಿವಂತಿಕೆ ವಿಶ್ವ ಚಿಂತನೆ ಹಾಗೂ ಸತ್ಯ ಶೋಧನೆಯೊಂದಿಗೆ ಕೂಡಿದೆ. ಅದರ ಸೌಂದರ್ಯ ರಾಗದ್ವೇಷರಹಿತವಾಗಿ ಕೂಡಿರುವ ಬಗ್ಗೆ ಹೇಳಿದ್ದಾರೆ.
ಒಟ್ಟಿನಲ್ಲಿ ತಮ್ಮ ಅದ್ಬುತ ಬದುಕು ಸವೆಸಿದರ ಕುರಿತು ಶ್ರೀಗಳು ಹೇಳಿದ್ದಾರೆ. ಕೊನೆಗೆ ತಮ್ಮ ಅಂತಿಮ ಕಾರ್ಯ ದೇಹಕ್ಕೆ ಅಗ್ನಿಸ್ಪರ್ಷ ಮಾಡಬೇಕು ಜೊತೆಗೆ ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಬೇಕು ಯಾವುದೇ ಸ್ಮಾರಕ ನಿರ್ಮಾಣ ಮಾಡದಂತೆ ಪತ್ರದಲ್ಲಿ ತಿಳಿಸಿದ್ದಾರೆ.

